Ad imageAd image

ಹುಬ್ಬಳ್ಳಿ: ರಕ್ತದಲ್ಲಿ ಸಿಎಂಗೆ ಪತ್ರ ಬರೆದ ಪೌರ ಕಾರ್ಮಿಕರು

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಲ್ಲಿನ ಪಾಲಿಕೆ ಎದುರು ಪೌರ ಕಾರ್ಮಿಕರ(Civil Workers) ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಆಮರಣ ಉಪವಾಸ ಪ್ರತಿಭಟನೆ ಸೋಮವಾರ 5ನೇ ದಿನವೂ ಮುಂದುವರೆಯಿತು.

Nagesh Talawar
ಹುಬ್ಬಳ್ಳಿ: ರಕ್ತದಲ್ಲಿ ಸಿಎಂಗೆ ಪತ್ರ ಬರೆದ ಪೌರ ಕಾರ್ಮಿಕರು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ(Hubballi): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಲ್ಲಿನ ಪಾಲಿಕೆ ಎದುರು ಪೌರ ಕಾರ್ಮಿಕರ(Civil Workers) ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಆಮರಣ ಉಪವಾಸ ಪ್ರತಿಭಟನೆ ಸೋಮವಾರ 5ನೇ ದಿನವೂ ಮುಂದುವರೆಯಿತು. ಪ್ರತಿಭಟನಾಕಾರರು ಮಳೆಯಲ್ಲಿಯೇ ರಕ್ತದಲ್ಲಿ ಸಿಎಂಗೆ(CM) ಪತ್ರ ಬರೆಯುವ ಮೂಲಕ ಗಮನ ಸೆಳೆದರು.
ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳಿ, ನೇರ ವೇತನ ಪಾವತಿ ಮಾಡಿರಿ, ಪೌರ ಕಾರ್ಮಿಕರಿಗೆ ಅನ್ಯಾಯ ಮಾಡದಿರಿ ಎಂಬುದು ಸೇರಿದಂತೆ ವಿವಿಧ ಘೋಷಣೆಯ ಪತ್ರಗಳನ್ನು ರಕ್ತದಲ್ಲಿಯೇ ಬರದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಸಂಪೂರ್ಣ ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಪೌರಕಾರ್ಮಿಕರ ಬಗ್ಗೆ ಕಿಂಚಿತ್ ಕಾಳಜಿಯೂ ಇಲ್ಲದಂತಾಗಿದೆ. ಹಲವಾರು ವರ್ಷಗಳಿಂದ ಪೌರಕಾರ್ಮಿಕರು ತಮ್ಮ ಹಕ್ಕೋತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿದರೂ, ಅದನ್ನು ಪರಿಗಣಿಸದೇ, ದಲಿತ ಪೌರ ಕಾರ್ಮಿಕರ ಹೋರಾಟ(Protest) ಹಾಗೂ ಹಕ್ಕುಗಳು ದಮನ ಮಾಡುವ ಹುನ್ನಾರ ನಡೆಸುತ್ತಿದೆ ಎಂದು ದೂರಿದರು.
ಪಾಲಿಕೆ ಅಧಿಕಾರಿಗಳು ಧರಣಿ ನಿರತ ಪೌರಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕುವ ಬೆದರಿಕೆ ಹಾಕುತ್ತಿದ್ದಾರೆ. ಪ್ರತಿಭಟನಾಕಾರರಿಗೆ ಕಾನೂನು(Law) ಬಾಹಿರವಾಗಿ ನೋಟೀಸ್ ನೀಡುವ ಮೂಲಕ ಧಮಕಿ ಹಾಕಲಾಗುತ್ತಿದೆ. ಸರ್ಕಾರ ಹಾಗೂ ಪಾಲಿಕೆ ಅಧಿಕಾರಿಗಳು ಪೌರಕಾರ್ಮಿಕರ ಮೇಲೆ ಅಮಾನವೀಯವಾಗಿ ದೌರ್ಜನ್ಯ ನಡೆಸುತ್ತಿದ್ದಾರೆ. ಸರ್ಕಾರ ಹೋರಡಿಸಿರುವ ಆದೇಶ ಅನುಷ್ಠಾನಗೊಳಿಸದೇ ಅನ್ಯಾಯ ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಸ್ಥಳಿಯ ರಾಜಕೀಯ ಮುಖಂಡರು ಕೇವಲ ವೋಟ್ ಬ್ಯಾಂಕ್‌ಗೆ ಮಾತ್ರ ಪೌರ ಕಾರ್ಮಿಕರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಧರಣಿ ನಿರತ 5 ಜನ ಪೌರಕಾರ್ಮಿಕರು ತೀವ್ರ ಅಸ್ವಸ್ಥಗೊಂಡ ಕಾರಣ ಅವರಿಗೆ ಚಿಕಿತ್ಸೆ ಕೊಡಿಸಿದ ಘಟನೆಯೂ ನಡೆಯಿತು.
ಸಂಘದ ಧಾರವಾಡ ಜಿಲ್ಲಾಧ್ಯಕ್ಷ ಡಾ.ವಿಜಯ ಗುಂಟ್ರಾಳ, ಗಳೆಪ್ಪಾ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ಸೋಮು ಮೊರಬದ, ಕನಕಪ್ಪ ಕೋಟಬಾಗಿ, ಚಂದ್ರಶೇಖರ ಖಾನಾಪುರ, ಕಿರಣಕುಮಾರ ಸೋಮರಡ್ಡಿ, ಸುರೇಶ ನಾಗರಾಳ, ವಿಜಯಕುಮಾರ ಗಬ್ಬೂರ, ರವಿ ಹೊಸಮನಿ, ಲಕ್ಷ್ಮೀ ದೇವರಾಗುಡಿಹಾಳ, ಮಂಜುನಾಥ್ ಯರಮಸಾಳ, ಆನಂದ ಬಾವುರ, ರಾಮು ತಿಳಿಗಾಳ ನಿಂಗಪ್ಪ ರಾಮ್ಮಯ್ಯನವರ, ಮಲ್ಲಿಕಾರ್ಜುನ್ ಅನಂತಪುರ ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article