ಪ್ರಜಾಸ್ತ್ರ ಸುದ್ದಿ
ವಿಜಯುರ(Vijayapura): ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬ ವ್ಯಕ್ತಿ ಆರೋಗ್ಯವಂತವಾಗಿರುವುದು ಅತ್ಯವಶ್ಯಕವಾಗಿದೆ. ಹೀಗಾಗಿ ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ(Cleanliness) ಮೂಲಕ ಸ್ವಚ್ಛ, ಸುಂದರ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಚ್.ನಾಗೂರ ಕರೆ ನೀಡಿದರು. ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಮಾದರಿ ಪ್ರಾಥಮಿಕ(School) ಶಾಲೆ, ಸರ್ಕಾರಿ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕನಕ ನಗರ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಭೀಮನಗರ, ಶ್ರೀ ಎಸ್.ಬಿ.ಪಾಟೀಲ ಸಂಯುಕ್ತ ಪ ಪೂ ಕಾಲೇಜು(ಪ್ರೌಢ ಶಾಲೆ ವಿಭಾಗ) ಹಾಗೂ ಉರ್ದು ಸರ್ಕಾರಿ ಪ್ರೌಢ ಶಾಲೆ ಇವರ ಸಹಯೋಗದಲ್ಲಿ ನಡೆದ ಮನಗೂಳಿ ಪಟ್ಟಣದಲ್ಲಿ ಶನಿವಾರ ಸ್ವಚ್ಛತಾ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ವಿವಿಧ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನೊಳಗೊಂಡ ಜಾಗೃತಿ(Awareness) ಜಾಥಾವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ನಮ್ಮ ಶಾಲೆ ನಾವು ಸ್ವಚ್ಚಗೊಳಿಸೋಣ, ನಮ್ಮ ಸ್ವಚ್ಚತೆ ನಮ್ಮ ಆರೋಗ್ಯ, ಪ್ರತಿ ಮನೆಗೆ ಶೌಚಾಲಯ, ಸ್ವಚ್ಚತೆ ಹಾಗೂ ಶುಚಿತ್ವ-ಅಭಿವೃದ್ಧಿ-ಯಶಸ್ಸನ್ನು ನೀಡುತ್ತದೆ ಎಂದು ಘೋಷಣೆಗಳನ್ನು ಜಾಗೃತಿ ಮೂಡಿಸಲಾಯಿತು. ಎಂಪಿ.ಎಸ್, ಕೆಜಿಎಸ್, ಭೀಮನಗರ ಕೆಬಿಎಲ್ ಪಿಎಸ್ ಶಾಲೆಯಲ್ಲಿ ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ಶುಚಿತ್ವದ ವಿಧಾನ ತಿಳಿಸಿಕೊಡಲಾಯಿತು.
ಸ್ವಚ್ಚತಾ ಜಾಗೃತಿ ಜಾಥಾದಲ್ಲಿ ಬಿ.ಆರ್.ಸಿ.ಓ ಬ.ಬಾಗೇವಾಡಿ, ಶಿಕ್ಷಣ ಸಂಯೋಜಕರು, ಬಿ.ಆರ್.ಪಿ. ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಹನಗಂಡಿ, ಸುವರ್ಣಾ ಅಳ್ಳಗಿ, ಮನಗೂಳಿಯ ಸಿ.ಅರ್.ಪಿ.ಗಳು, ಎಲ್ಲಾ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು