ಪ್ರಜಾಸ್ತ್ರ ಸುದ್ದಿ
ಕೊಲ್ಕತ್ತಾ(kolkata): ಸರ್ಕಾರ ಸ್ವಾಮ್ಯದ ಕಾರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ವೈದ್ಯ(doctor case) ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(mamata banerjee) ಅವರು ಪೊಲೀಸರಿಗೆ ಒಂದು ವಾರದ ಡೆಡ್ ಲೈನ್ ಕೊಟ್ಟಿದ್ದಾರೆ. ಇಲ್ಲದೆ ಹೋದರೆ ಪ್ರಕರಣವನ್ನು ಸಿಬಿಐಗೆ ವಹಿಸುವುದಾಗಿ ಹೇಳಿದ್ದಾರೆ.
ಹತ್ಯೆಯಾದ ವಿದ್ಯಾರ್ಥಿನಿಯ ನಿವಾಸಕ್ಕೆ ಇಂದು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಭಾನುವಾರದೊಳಗೆ ಪ್ರಕರಣವನ್ನು ಪೊಲೀಸರು ಭೇದಿಸದಿದ್ದರೆ ಸಿಬಿಐ(CBI) ತನಿಖೆಗೆ ಒಪ್ಪಿಸುತ್ತೇವೆ ಎಂದರು. ಕಳೆದ ಶುಕ್ರವಾರ ಕಾರ್ ವೈದ್ಯಕೀಯ(kar medical college and hospital) ಕಾಲೇಜು ಹಾಗೂ ಆಸ್ಪತ್ರೆಯ ಸೆಮಿನಾರ್ ಹಾಲ್ ನಲ್ಲಿ ದ್ವಿತೀಯ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾಗಿತ್ತು. ಹತ್ಯೆಗೂ ಮೊದಲು(Rape and Murder) ಅತ್ಯಾಚಾರವೆಸಗಿದ್ದಾರೆ ಎನ್ನುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿದೆ. ಕಾಲೇಜಿನ ಪ್ರಿನ್ಸಿಪಾಲ್ ರಾಜೀನಾಮೆ ಸಲ್ಲಿಸಿದ್ದಾರೆ. ಓರ್ವನ ಬಂಧನವಾಗಿದೆ.