ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಮುಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 3ನೇ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾಮೈದ ಗುರುವಾರ ವಿಚಾರಣೆಗೆ ಹಾಜರಾಗಿದ್ದಾರೆ. 3ನೇ ಆರೋಪಿ ಬಿ.ಎಂ ಮಲ್ಲಿಕಾರ್ಜುನ್ ಹಾಗೂ 4ನೇ ಆರೋಪಿ ಜೆ.ದೇವರಾಜು ಅವರು ಲೋಕಾಯುಕ್ತ ಪೊಲೀಸ್ ಕಚೇರಿಗೆ ಹಾಜರಾಗಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸುವ ಕೆಲಸ ಮಾಡಿದ್ದಾರೆ.
ಈ ಇಬ್ಬರು ಆರೋಪಿಗಳಿಗೆ ಬುಧವಾರ ಲೋಕಾಯುಕ್ತ ಕಚೇರಿಯಿಂದ ನೋಟಿಸ್ ಕಳಿಸಲಾಗಿತ್ತು. ಅದರಂತೆ ಇಂದು ಅವರಿಬ್ಬರು ಹಾಜರಾಗಿದ್ದಾರೆ. ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ ಉದ್ದೇಶ್ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಎ1 ಆರೋಪಿ, ಇವರ ಪತ್ನಿ ಪಾರ್ವತಿ ಎ2 ಆರೋಪಿಯಾಗಿದ್ದಾರೆ.