ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಗರಂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪದೆಪದೆ ಯಾಕೆ ನಾಯಕತ್ವ ಬದಲಾವಣೆ ಬಗ್ಗೆ ಪ್ರಶ್ನೆ ಕೇಳುತ್ತೀರಿ. ಹೈಕಮಾಂಡ್ ಹೇಳಿದ್ರೆ ನಾನು ಕೇಳಬೇಕು. ಅವರು ಕೇಳಬೇಕು(ಡಿ.ಕೆ ಶಿವಕುಮಾರ್) ಮತ್ತೆ ಯಾರಿಗೂ ಈ ಪ್ರಶ್ನೆ ಕೇಳಬೇಡಿ ಎಂದು ಗರಂ ಆದರು.
ಮೂರು ತಿಂಗಳಿಂದ ಇದನ್ನೇ ಕೇಳುತ್ತಿದ್ದೀರಿ. ಎಷ್ಟು ಸಾರಿ ಇದನ್ನೇ ಕೇಳುತ್ತೀರಿ ಎಂದರು. ಶಾಸಕರು ವಿದೇಶ ಪ್ರವಾಸದ ಪ್ರಶ್ನೆಗೆ, ಅವರ ದುಡ್ಡಲ್ಲಿ ಅವರು ಹೋಗುತ್ತಾರೆ. ಅದರಲ್ಲಿ ತಪ್ಪೇನಿದೆ. ಅದು ನನ್ನ ಗಮನದಲ್ಲಿ ಇಲ್ಲ ಅಂತಾ ಹೇಳಿದರು.




