ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಟ್ಯೂಷನ್ ಗೆ ಹೋಗಿದ್ದ ಮಗಳನ್ನು ಕರೆದುಕೊಂಡು ಬರಲು ಬಂದಿದ್ದ ತಾಯಿ ರಸ್ತೆ ದಾಟುವಾಗ ಆಟೋ(Auto) ಡಿಕ್ಕಿ ಹೊಡೆದ ಘಟನೆ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಹತ್ತಿರ ನಡೆದಿತ್ತು. ಇದನ್ನು ನೋಡಿದ ಮಗಳು ತಕ್ಷಣ ಓಡೋಡಿ ಬಂದು ಆಟೋ ಮೇಲೆತ್ತಿದ್ದಳು. ಇದು ಸಿಸಿಟಿವಿಯಲ್ಲಿ(CCTV) ಸೆರೆಯಾಗಿದೆ. ಬಾಲಕಿಯ ಸಮಯ ಪ್ರಜ್ಞೆ, ಧೈರ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೆಚ್ಚಿಕೊಂಡಿದ್ದು, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಬರೆದಿದ್ದಾರೆ.
ಸಧ್ಯ ಮಹಿಳೆ ಸುರತ್ಕಲ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಬೆನ್ನುಮೂಳೆಗೆ ಹಾನಿಯಾಗಿದೆ. ಆರ್ಥಿಕ ನೆರವು ನೀಡುವವರ ಅವಶ್ಯಕತೆಯೂ ಅವರಿದೆ. ಅಪಘಾತವಾದ ತಕ್ಷಣ ಓಡೋಡಿ ಬಂದು ಆಟೋ ಎತ್ತಿದ 7ನೇ ತರಗತಿ ಬಾಲಕಿ ಒಂದೇ ಸಮನೆ ಅಳುವುದು, ತಾಯಿಯನ್ನು ಮಾತನಾಡಿಸುವುದು ದೃಶ್ಯದಲ್ಲಿ ಕಾಣಿಸುತ್ತೆ. ಅಪಘಾತದ ಸಂದರ್ಭದಲ್ಲಿ ಸಹಾಯಕ್ಕೆ ಬರದೆ ಮೊಬೈಲ್ ನಲ್ಲಿ ವಿಡಿಯೋ(Video) ಮಾಡುವುದನ್ನು ಹಲವು ಬಾರಿ ಮಾಧ್ಯಮಗಳಲ್ಲಿ ಕಂಡಿದ್ದೆ, ಇದು ಭವಿಷ್ಯದ ದಿನಗಳ ಬಗ್ಗೆ ನನ್ನಲ್ಲಿ ಆತಂಕವನ್ನೂ ಮೂಡಿಸಿತ್ತು. ಈ ಪುಟ್ಟ ಬಾಲಕಿಯ ಕಾರ್ಯ ಇಡೀ ಸಮಾಜಕ್ಕೊಂದು ಸಂದೇಶ ರವಾನಿಸಿದಂತಿದೆ ಎಂದು ಸಿಎಂ ಬರೆದಿದ್ದಾರೆ.