ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ರಾಷ್ಟ್ರಪತಿಗಳ ಭೇಟಿಗಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ರಾಷ್ಟ್ರಪತಿ ಭವನಕ್ಕೆ ತೆರಳಿದ್ದರು. ಈ ವೇಳೆ ಬಾಲಿವುಡ್ ನಟ ಆಮೀರ್ ಖಾನ್ ಆಕಸ್ಮಿಕವಾಗಿ ಭೇಟಿಯಾದರು. ಈ ವೇಳೆ ಒಬ್ಬರಿಗೊಬ್ಬರು ಕುಶೋಲಪರಿಯನ್ನು ವಿಚಾರಿಸಿದರು. ಆಮೀರ್ ಖಾನ್ ಅವರ ಮುಂದಿನ ಚಿತ್ರಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭ ಕೋರಿದರು.
ಇತ್ತೀಚೆಗೆ ನಟ ಆಮೀರ್ ಖಾನ್ ನಟನೆಯ ಸಿತಾರೆ ಜಮೀನ್ ಪರ್ ಸಿನಿಮಾ ರಿಲೀಸ್ ಆಗಿದೆ. ಜನರ ಮೆಚ್ಚುಗೆ ಗಳಿಸಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಸಲುವಾಗಿ ಏನಾದರೂ ರಾಷ್ಟ್ರಪತಿಗಳನ್ನು ಭೇಟಿಯಾಗಿರಬಹುದಾ ಅನ್ನೋ ಪ್ರಶ್ನೆ ಮೂಡಿದೆ.