ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂದು ಬಿಹಾರದ ಮುಖಂಡರು ಹೇಳಿದ್ದಾರೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿ ಉತ್ತರಿಸಿದರು. ಮಾಧ್ಯಮದವರಿಗೆ ಇದು ಬಿಟ್ಟು ಬೇರೆ ವಿಷಯವಿಲ್ಲವೇ? ಹೈಕಮಾಂಡ್ ಬಿಟ್ಟು ಬೇರೆಯವರು ಏನೇ ಮಾತನಾಡಿದರೂ ಅದಕ್ಕೆ ಕಿಮ್ಮತ್ತಿಲ್ಲ ಎಂದರು.
ಜನರು ಮಾತನಾಡುವುದಕ್ಕಿಂತ ಮಾಧ್ಯಮದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಸೋನಿಯಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ ನಮ್ಮ ಹೈಕಮಾಂಡ್. ಜನರು ಏನೇನೂ ಮಾತನಾಡಿಕೊಳ್ಳುತ್ತಾರೆ. ಹೈಕಮಾಂಡ್ ಹೇಳಬೇಕಲ್ಲವೆ ಎಂದರು. ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಬಿಹಾರ ಚುನಾವಣೆ ಮುಗಿದ ಬಳಿಕ ನವೆಂಬರ್ 15ಕ್ಕೆ ದೆಹಲಿಗೆ ಹೋಗಿ ಚರ್ಚಿಸುತ್ತೇನೆ ಅಂತಾ ಹೇಳಿದರು.




