ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಯುದ್ಧ ವಿರಾಮ ಘೋಷಣೆಗೂ ಮೊದಲು ಸರ್ವಪಕ್ಷ ಸಭೆ ಕರೆಯಬೇಕಿತ್ತು. ಸಭೆಯಲ್ಲಿ ಚರ್ಚೆ ಮಾಡಿ ನಿರ್ಧರಿಸಬಹುದಿತ್ತು. 1971ರ ಯುದ್ಧಕ್ಕೆ ಹೋಲಿಕೆ ಮಾಡಿ ನಾನು ಮಾತನಾಡುವುದಿಲ್ಲ. ಆವತ್ತಿನ ಪರಿಸ್ಥಿತಿಯೇ ಬೇರೆ. ಇವತ್ತಿನ ಪರಿಸ್ಥಿತಿಯೇ ಬೇರೆ. ಪಾಕಿಸ್ತಾನ ಮೇಲಿನ ಕಾರ್ಯಾಚರಣೆಯ ಕ್ರೆಡಿಟ್ ಅನ್ನು ಯಾವ ಪಕ್ಷದವರೂ ತೆಗೆದುಕೊಳ್ಳಬಾರದು. ಅದು ಸೇನೆಗೆ ಮಾತ್ರ ಸೇರತಕ್ಕದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸೋಮವಾರ ಹೆಚ್.ಡಿ ಕೋಟೆ ಹತ್ತಿರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಎರಡೂ ದೇಶಗಳ ಸೇನಾಧಿಕಾರಿಗಳ ಸಭೆಯಿದೆ. ಏನು ತೀರ್ಮಾನವಾಗುತ್ತದೆ ನೋಡೋಣ ಎಂದರು.
ಇನ್ನು ರಾಜ್ಯದಲ್ಲಿನ ಎಲ್ಲ ಪಾಕಿಸ್ತಾನದವರನ್ನು ಹೊರಗೆ ಕಳಿಸಿದ್ದೇವೆ. ಮೈಸೂರಿನ ಮೂವರ ಮಕ್ಕಳ ವಿಚಾರದಲ್ಲಿ ತಾಂತ್ರಿಕ ಸಮಸ್ಯೆಯಿದೆ. ಅವರು ಇಲ್ಲಿಯೇ ಇದ್ದಾರೆ. ಕದನ ವಿರಾಮ ಘೋಷಣೆಯಾಗಿದ್ದರಿಂದ 2 ವರ್ಷ ಸರ್ಕಾರ ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಸಂಭ್ರಮಾಚರಣೆಯನ್ನು ಮಾಡುತ್ತೇವೆ ಅಂತಾ ಹೇಳಿದರು.