ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಇವತ್ತಿನಿಂದ 17ನೇ ತಾರೀಕನ ತನಕ ಪರಿಶಿಷ್ಟ ಜಾತಿಗಳ ಗಣತಿ ನಡೆಯುತ್ತಿದೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗ ರಚನೆ ಮಾಡಲಾಗಿದೆ. ಅವರಿಗೆ ಕೊಟ್ಟಿರುವ ಜವಾಬ್ದಾರಿ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಬಗ್ಗೆ ನಿಖರವಾದ ವರದಿ ಕೊಡುವ ಸಲುವಾಗಿ ಈ ಆಯೋಗ ರಚನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಈ ಕುರಿತು ಸೋಮವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.
ಆರ್ಟಿಕಲ್ 341ರ ಪ್ರಕಾರ ಪರಿಶಿಷ್ಟ ಜಾತಿಗಳಲ್ಲಿ 101 ಜಾತಿಗಳನ್ನು ಗುರುತಿಸಲಾಗಿದೆ. ಅದರಲ್ಲಿ ಎಡ, ಬಲ, ಬೋವಿಗಳ, ಲಂಬಾಣಿಗಳು, ಕೊರಮ, ಕೊರಚ ಇತರೆ ಉಪಜಾತಿಗಳು ಬರುತ್ತವೆ. ಸದಾಶಿವ ಆಯೋಗ ವರದಿ ಕೊಟ್ಟಾಗ 2011ರ ಜನಗಣತಿ ಆಧಾರದಲ್ಲಿ ಗುರುತಿಸಿದ್ದರು. 01-08-2024ರಲ್ಲಿ ಸುಪ್ರೀಂ ಕೋರ್ಟ್ ಆದೇಶವೊಂದನ್ನು ಕೊಡುತ್ತಾರೆ, ಪಂಜಾಬ್ ಹಾಗೂ ಇತರೆ ವರ್ಸಸ್ ದೇವೇಂದ್ರ ವರ್ಸಸ್ ಇತರೆ ಪ್ರಕರಣದಲ್ಲಿ. ಸಂವಿಧಾನದಲ್ಲಿ ಒಳಮೀಸಲಾತಿ ಮಾಡಲಿಕ್ಕೆ ಅವಕಾಶವಿದೆ ಎಂದು ಹೇಳಿ, ಆಯಾ ರಾಜ್ಯಗಳಿಗೆ ಅಧಿಕಾರ ಕೊಡುತ್ತಾರೆ ಎಂದು ಹೇಳಿದರು.
ನಾಗಮೋಹನ್ ದಾಸ್ ಆಯೋಗದ ಮಧ್ಯಂತರ ವರದಿಯಲ್ಲಿ ಎಂಪರಿಕಲ್ ಡಾಟಾ ಇರಲಬೇಕು ಅಂತಾ ಹೇಳ್ತಾರೆ. ಆದಿ ದ್ರಾವಿಡ್, ಆದಿ ಕರ್ನಾಟಕ, ಆದಿ ಆಂಧ್ರ ಎಂದು ಎಡಗೈ, ಬಲಗೈನವರು ಬರೆದುಕೊಂಡಿರುತ್ತಾರೆ. ಎಸ್ಸಿ ಎಂದು ಬರೆದುಕೊಂಡಿರುತ್ತಾರೆ. ನಿರ್ದಿಷ್ಟವಾಗಿ ಇವರು ಎಡಗೈ, ಬಲಗೈ ಎಂದು ಗೊತ್ತಾಗಲ್ಲ. ನಿಖರವಾಗಿ ಯಾರು ಎಷ್ಟು ಜನಸಂಖ್ಯೆ ಇದೆ ಎಂದು 2011ರ ಜನಗಣತಿ ಪ್ರಕಾರ ಗೊತ್ತಾಗಲ್ಲ. ಹೀಗಾಗಿ ಒಳಮೀಸಲಾತಿ ಕೊಡಲು ನಿರ್ದಿಷ್ಟವಾದ ಅಂಕಿಅಂಶ ಬೇಕಾಗುತ್ತೆ. 65 ಸಾವಿರ ಶಿಕ್ಷರು ಇದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮನೆ ಮನೆಗೆ ಹೋಗಿ ಭೇಟಿ ಕೊಡುವುದರ ಜೊತೆಗೆ 2ನೇ ಹಂತದಲ್ಲಿ 19-05-2025ರಿಂದ 21-05-2025ರವರೆಗೆ ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ನಡೆಸಲಾಗುವುದು. 3ನೇ ಹಂತದಲ್ಲಿ 19 ರಿಂದ 23ರ ತನಕ ಆನ್ಲೈನ್ ಮೂಲಕ ಸ್ವಯಂ ಘೋಷಣೆ ಮಾಡಿಕೊಳ್ಳಬಹುದು. ಇದೆಲ್ಲ ಆದ ಮೇಲೆ 60 ದಿನಗಳಲ್ಲಿ ವರದಿ ಕೊಡಿ ಎಂದು ನಾವು ಹೇಳಿದ್ದೇವೆ ಎಂದು ಹೇಳಿದರು.
ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಖಾತೆ ಸಿಚಿವ ಹೆಚ್.ಸಿ ಮಹಾದೇವ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಖಾತೆ ಸಚಿವ ಕೆ.ಹೆಚ್ ಮುನಿಯಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.