Ad imageAd image

ಚುನಾಯಿತ ಸರ್ಕಾರ ಅಸ್ಥಿರಗೊಳಿಸಲು ರಾಜಭವನ ದುರ್ಬಳಕೆ: ಸಿಎಂ ಸಿದ್ದರಾಮಯ್ಯ

Nagesh Talawar
ಚುನಾಯಿತ ಸರ್ಕಾರ ಅಸ್ಥಿರಗೊಳಿಸಲು ರಾಜಭವನ ದುರ್ಬಳಕೆ: ಸಿಎಂ ಸಿದ್ದರಾಮಯ್ಯ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮೈಸೂರು(Mysore): ಮುಡಾ(MUDA) ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ(Siddaramaiah) ರಾಜ್ಯಪಾಲರು ನೀಡಿರುವ ನೋಟಿಸ್ ಸಂಬಂಧ ಇಂದು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ, ಕೇಂದ್ರ ಸರ್ಕಾರ ರಾಜಭವನ ದುರ್ಬಳಕೆ ಮಾಡಿಕೊಂಡು ಚುನಾಯಿತ ಸರ್ಕಾರ ಅಸ್ಥಿರಗೊಳಿಸಲು ನೋಡುತ್ತಿದೆ. ಎಲ್ಲ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್ ಗೆ ತಿಳಿಸಿದ್ದೇನೆ. ರಾಜ್ಯಪಾಲರ(Governor) ನೋಟಿಸ್ ಗೆ ಸಿಎಂ ಶೇಕ್ ಆಗಿದ್ದಾರೆ ಎನ್ನುವ ವಿಪಕ್ಷ ನಾಯಕ ಆರ್.ಅಶೋಕಗೂ ತಿರುಗೇಟು ನೀಡಿದರು.

ನನ್ನ ವಿರುದ್ಧ ದೂರು ಕೊಟ್ಟಿರುವ ಟಿ.ಕೆ ಅಬ್ರಾಹಿಂ ಒಬ್ಬ ಬ್ಲ್ಯಾಕ್ ಮೇಲರ್. ಅವನ ದೂರಿನ ಮೇಲೆ ಕ್ರಮ ವಹಿಸಿರುವುದು ಕಾನೂನು ಬಾಹಿರವಾಗಿದೆ. ಸಚಿವ ಸಂಪುಟ ಸಭೆ ನಡೆಸಿ ಎಂದು ಉಪ ಮುಖ್ಯಮಂತ್ರಿಗೆ ಹೇಳಿದ್ದೆ. ಕೆಟ್ಟ ಸಂಪ್ರದಾಯ ನಡೆಯಬಾರದು ಎಂದು ನಾನು ಸಭೆಗೆ ಹೋಗಿರಲಿಲ್ಲ. ನಾನು ಚುನಾಯಿತ ಸರ್ಕಾರದ ಮುಖ್ಯಮಂತ್ರಿ. ನನಗೆ ನೋಟಿಸ್ ಕೊಡುವಾಗ ಕಾನೂನು ಬಗ್ಗೆ ಸಮರ್ಪಕವಾಗಿ ನೋಡಬೇಕಿತ್ತು. ಈ ಮೂಲಕ ಸಂವಿಧಾನ ಕೊಲೆ ಮಾಡುವುದು, ಪ್ರಜಾಪ್ರಭುತ್ವ ನಾಶ ಮಾಡುವುದಾಗಿದೆ ಎಂದು ವಾಗ್ದಾಳಿ ನಡೆಸಿದರು.

ಈ ಪ್ರಕರಣದಲ್ಲಿ ಏನೂ ಇಲ್ಲವೆಂದು ಕುಮಾರಸ್ವಾಮಿ ಪಾದಯಾತ್ರೆ ಬೇಡ. ಭಾಗವಹಿಸಿಲ್ಲ ಎಂದಿದ್ದರು. ಒಂದೇ ದಿನದಲ್ಲಿ ಬದಲಾಗಿದ್ದಾರೆ ಅಂದರೆ ಸ್ವಇಚ್ಛೆಯಿಂದ ಇಲ್ಲವೆನ್ನುವುದು ತಿಳಿಯುತ್ತೆ. ಸಚಿವ ಸಂಪುಟ ಸಭೆಯಲ್ಲಿ(Cabinet Meeting) ರಾಜ್ಯಪಾಲರ ನೋಟಿಸ್ ಸಂಬಂಧ ಸುದೀರ್ಘ ಚರ್ಚೆ ನಡೆದಿದೆ. ನೋಟಿಸ್ ಕಾನೂನು ಬಾಹಿರ. ವಾಪಸ್ ಪಡೆಯಬೇಕು ಎಂದು ಸಲಹೆ ನೀಡದೆ ಅಂತಾ ಹೇಳಿದರು.

WhatsApp Group Join Now
Telegram Group Join Now
Share This Article