Ad imageAd image

ದಸರಾ ಜನರ ಉತ್ಸವ ಆಗಬೇಕು: ಸಿಎಂ ಸಿದ್ದರಾಮಯ್ಯ

ಮೈಸೂರು ದಸರಾ-2024ಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

Nagesh Talawar
ದಸರಾ ಜನರ ಉತ್ಸವ ಆಗಬೇಕು: ಸಿಎಂ ಸಿದ್ದರಾಮಯ್ಯ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Benagloru): ಮೈಸೂರು(Dasara) ದಸರಾ-2024ಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕರೋನಾ(Corona) ಹಾಗೂ ಬರಗಾಲ(Drought) ಕಾರಣಕ್ಕೆ ಕಳೆದ ಬಾರಿ ಅದ್ಧೂರಿ ದಸರಾ ನಡೆಸಲು ಆಗಿಲ್ಲ. ಈ ಬಾರಿ ವಿಜೃಂಭಣೆಯ ದಸರಾ ಆಚರಿಸೋಣ. ಐತಿಹಾಸಿಕ ನಾಡ ಹಬ್ಬಕ್ಕೆ ಅಗತ್ಯವಿದ್ದಷ್ಟು ಹಣವನ್ನು ನಾವು ನೀಡುತ್ತೇವೆ. ಇದು ಜನರ ಉತ್ಸವ ಆಗಬೇಕು ಎಂದರು.

ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ, ಆಕರ್ಷಕ ಹಾಗೂ ಅರ್ಥಪೂರ್ಣ ಟ್ಯಾಬ್ಲೋಗಳು, ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ಆಹಾರ, ವಸ್ತು ಪ್ರದರ್ಶನ, ದೀಪಾಂಲಕಾರ ಸೇರಿದಂತೆ ಪ್ರತಿಯೊಂದು ಅರ್ಥಪೂರ್ಣವಾಗಿರಬೇಕು. ದೀಪಾಂಲಕಾರ 21 ದಿನ ಇರಲಿ. ಗ್ಯಾರೆಂಟಿ ಯೋಜನೆ ಹಾಗೂ ಸರ್ಕಾರದ ಸಾರ್ಥಕ ಕೆಲಸಗಳ ಬಗ್ಗೆ ಪ್ರದರ್ಶನ ಮತ್ತು ತಿಳವಳಿಕೆ ಮೂಡಿಸಬೇಕು. ಕರ್ನಾಟಕ ಸಂಭ್ರಮ-20 ನವೆಂಬರ್ ತನಕ ನಡೆಯಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ರೂಪಿಸಬೇಕು ಎಂದು ಅಧಿಕಾರಿಗಳಿಗೆ, ಸಂಬಂಧಪಟ್ಟ ಸಚಿವರಿಗೆ ತಿಳಿಸಿದರು.

ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್(DK Shivakumar), ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹಾದೇವಪ್ಪ, ಇಂಧನ ಸಚಿವ ಕೆ.ಜೆ ಜಾರ್ಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article