ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಇಂದು ವಿದ್ಯಾವಂತರೆ ಹೆಚ್ಚಿನ ಸಂಖ್ಯೆಯಲ್ಲಿ ಜಾತಿವಾದಿಗಳಾಗುತ್ತಿದ್ದಾರೆ. ಈ ಕಾರಣಕ್ಕೆ ಅಸಮಾನತೆ ಹೆಚ್ಚಾಗುತ್ತಿದೆ. ಈ ಜಾತಿಯ ಅಸಮಾನತೆಗಾಗಿಯೇ ಮಹಾತ್ಮ(Gandhi) ಗಾಂಧಿಯನ್ನು ಕೊಂದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ನಗರದ ಗಾಂಧಿ ಭವನದಲ್ಲಿ ಗಾಂಧಿ ಸ್ಮಾರಿಕ ನಿಧಿಯ 75ನೇ ವರ್ಷದ ಸ್ಮರಣಾರ್ಥವಾಗಿ ನಡೆದ ‘21ನೇ ಶತಮಾನಕ್ಕೆ ಮಹಾತ್ಮ ಗಾಂಧೀಜಿ’ ಎನ್ನುವ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಖ್ಯಾತ ವಿಜ್ಞಾನಿ ಸ್ಫೀಪನ್ ಹಾಕಿಂಗ್, ಮನುಷ್ಯ ನೆಮ್ಮದಿ ಹುಡುಕಿಕೊಂಡು ಬೇರೆ ಗ್ರಹಗಳಿಗೆ ಹೋಗಬಾರದು. ಮನುಷ್ಯ ಮನುಷ್ಯರ ನಡುವೆ ಸಹಿಷ್ಣುತೆ ರೂಢಿಸಿಕೊಳ್ಳಬೇಕು. ಇಲ್ಲದೆ ಹೋದರೆ ಕುವೆಂಪು(Kuvempu) ಅವರ ವಿಶ್ವಮಾನವ ಆಶಯ ಕಷ್ಟವಾಗುತ್ತದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ಮಳೆ ಬರಲ್ಲ ಎಂದು ಮೌಢ್ಯ ಬಿತ್ತಿದರು. ಬಹಳ ಮಂದಿ ಶಿಕ್ಷಿತರೆ ಕಂದಾಚಾರ, ಮೌಢ್ಯವನ್ನು ಆಚರಿಸುತ್ತಾರೆ. ಬಸವಾದಿ ಶರಣರು ಕರ್ಮ ಸಿದ್ಧಾಂತವನ್ನು ಸಾರಾಸಗಟವಾಗಿ ತಿರಸ್ಕರಿಸಿದ್ದಾರೆ ಎಂದರು.
ಈ ವೇಳೆ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷರಾದ ರಾಮಚಂದ್ರ ರಾಹಿ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಕಾರ್ಯಾಧ್ಯಕ್ಷರಾದ ವಿಶುಕುಮಾರ್, ದೆಹಲಿ ಸ್ಮಾರಕ ನಿಧಿ ಅಧ್ಯಕ್ಷರಾದ ಸಂಜೋಯ್ ಸಿಂಗ್, ಸಚಿವ ಹೆಚ್.ಕೆ ಪಾಟೀಲ ಸೇರಿದಂತೆ ಅನೇಕರು ಭಾಗವಹಿಸಿದ್ದರು.