Ad imageAd image

ಹೈಕಮಾಂಡ್ ಅವಕಾಶ ಕೊಟ್ಟರೆ ಮತ್ತೆರಡು ಬಜೆಟ್ ಮಂಡಿಸುತ್ತೇನೆ: ಸಿಎಂ ಸಿದ್ದರಾಮಯ್ಯ

Nagesh Talawar
ಹೈಕಮಾಂಡ್ ಅವಕಾಶ ಕೊಟ್ಟರೆ ಮತ್ತೆರಡು ಬಜೆಟ್ ಮಂಡಿಸುತ್ತೇನೆ: ಸಿಎಂ ಸಿದ್ದರಾಮಯ್ಯ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮೈಸೂರು(Mysore): ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಶನಿವಾರ ತಾಲೂಕಿನ ಪಿಲ್ಲಹಳ್ಳಿ ಗ್ರಾಮದ ಹೆಲಿಪ್ಯಾಡ್ ನಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಡಿನ ಜನತೆ ನಾನು ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎಂದು ಬಯಸಿದ್ದಾರೆ. ಹೈಕಮಾಂಡ್ ಅವಕಾಶ ಕೊಟ್ಟರೆ ಮತ್ತೆರಡು ಬಜೆಟ್ ಮಂಡಿಸುತ್ತೇನೆ. ಇದರಲ್ಲಿ ಹೈಕಮಾಂಡ್ ತೀರ್ಮಾನ ಅಂತಿಮ ಎಂದಿದ್ದಾರೆ.

ಹೈಕಮಾಂಡ್ ಇರಿ ಎಂದರೆ ಇರುತ್ತೇನೆ. ಮುಂದುವರಿಯಿರಿ ಎಂದರೆ ಮುಂದುವರೆಯುತ್ತೇನೆ. ಯಾರೋ ಏನೋ ಹೇಳುತ್ತಾರೋ ಅನ್ನೋದು ನನಗೆ ಮುಖ್ಯವಲ್ಲ. ಹೈಕಮಾಂಡ್ ಮುಖ್ಯ. ದಾಖಲೆಗಳ ಬಜೆಟ್ ಮಂಡನೆ ಮೇಲೆ ನನಗೆ ನಂಬಿಕೆ ಇಲ್ಲ. ಅಭಿವೃದ್ಧಿಗಾಗಿ ಸಾಲ ಮಾಡಬೇಕಾಗುತ್ತೆ. ಆದರೆ, ಆರ್ಥಿಕ ಶಿಸ್ತಿನ ಇತಿಮಿತಿಯಲ್ಲಿ ಸಾಲ ಮಾಡಿದ್ದೇವೆ. ಇದರಿಂದ ರಾಜ್ಯದ ಜನರಿಗೆ ಹೊರೆಯಾಗಿಲ್ಲ ಅಂತಾ ಹೇಳಿದರು.

ಮೋದಿ ಅಧಿಕಾರಕ್ಕೆ ಬಂದ ಮೇಲೆ ಎಷ್ಟು ಸಾಲ ಮಾಡಿದ್ದಾರೆ ಅನ್ನೋದು ರಾಜ್ಯದ ಬಿಜೆಪಿ ನಾಯಕರಿಗೆ ಗೊತ್ತಿದೆಯಾ? ಬಿಜೆಪಿಯವರು ಆರ್ಥಿಕ ಶಿಸ್ತಿನ ಕಾಯ್ದೆ ಕಾನೂನುಗಳನ್ನು ಓದಿಕೊಳ್ಳಬೇಕು ಅಂತಾ ಕಿಡಿ ಕಾರಿದರು.

WhatsApp Group Join Now
Telegram Group Join Now
Share This Article