Ad imageAd image

ಪೂರ್ಣಾವಧಿ ಸಿಎಂ ಹೈಕಮಾಂಡ್ ತೀರ್ಮಾನ: ಸಿಎಂ ಸಿದ್ದರಾಮಯ್ಯ

Nagesh Talawar
ಪೂರ್ಣಾವಧಿ ಸಿಎಂ ಹೈಕಮಾಂಡ್ ತೀರ್ಮಾನ: ಸಿಎಂ ಸಿದ್ದರಾಮಯ್ಯ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮೈಸೂರು(Mysore): ಬಡವರು, ದಲಿತರು, ಹಿಂದುಳಿದವರಿಗೆ ನ್ಯಾಯ ಕೊಡಿಸುವುದೇ ರಾಜಕಾರಣ. ಜನರಿಗೆ ಕೆಲಸ ಮಾಡುವುದು ಖುಷಿ, ರಾಜಕಾರಣ ತೃಪ್ತಿ ಕೊಟ್ಟಿದೆ. ಸುದೀರ್ಘ ಅವಧಿಯ ಮುಖ್ಯಮಂತ್ರಿವೆಂಬ ದಾಖಲೆ ಮಾಡುತ್ತೇನೆ ಎಂದುಕೊಂಡಿರಲಿಲ್ಲ. ಡಿ.ದೇವರಾಜ ಅರಸು ಮತ್ತು ನಾನು ಮೈಸೂರಿನವರಾದರೂ ನಮ್ಮ ಕಾಲಘಟ್ಟ ಬೇರೆ ಎಂದರು.

ಮಂಗಳವಾರ ನಗರದಲ್ಲಿರುವ ನಿವಾಸದಲ್ಲಿ ಮಾತನಾಡಿದ ಅವರು, ದೇವರಾಜ ಅರಸು ಅವರು 1972ರಿಂದ 80ರ ತನಕ ಮುಖ್ಯಮಂತ್ರಿಯಾಗಿದ್ದರು. ಜನರ ಆಶೀರ್ವಾದಿಂದ ನಾನು 2013-18, 2023ರಲ್ಲಿ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿದ್ದೇನೆ. ಪೂರ್ಣಾವಧಿ ಸಿಎಂ ಆಗುತ್ತೇನೆ ಅನ್ನೋ ವಿಶ್ವಾಸವಿದೆ. ಹೈಕಮಾಂಡ್ ತೀರ್ಮಾನ ಮೇಲೆ ಅವಲಂಬಿಸಿದೆ ಎಂದರು. ಸಿಎಂ ಮನೆಯ ಸುತ್ತ ಸಂಭ್ರಮ ಮನೆ ಮಾಡಿತ್ತು. ಅಭಿಮಾನಿಗಳು, ಮುಖಂಡರು, ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದರು. ಕರ್ನಾಟಕ ಅಹಿಂದ ವರ್ಗಗಳ ಜಾಗೃತ ವೇದಿಕೆ, ಅಹಿಂದ ಮೈಸೂರು ಸಂಘಟನೆಗಳ ಸದಸ್ಯರು ನಾಟಿ ಕೋಳಿ ಪಲಾವ್ ಹಾಗೂ ಲಾಡು ವಿತರಿಸಿದರು.

WhatsApp Group Join Now
Telegram Group Join Now
Share This Article