ಪ್ರಜಾಸ್ತ್ರ ಸುದ್ದಿ
ಕಾರವಾರ(Karawara): ಕೋಡಿಭಾಗ್ ಹತ್ತಿರ ಕಾಳಿ(Kali river) ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ರಾತ್ರಿ ಸುಮಾರು 1 ಗಂಟೆಯ ವೇಳೆಗೆ ಕುಸಿದಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೇತುವೆ ನಿರ್ಮಿಸಲಾಗಿದೆ. ಘಟನೆಯಲ್ಲಿ ಲಾರಿ ಚಾಲಕನೊಬ್ಬ ಗಾಯಗೊಂಡಿದ್ದಾನೆ. ಫಿಲ್ಲರ್ ಕಂಬಗಳ ತುಂಡಾಗಿ ಸೇತುವೆ ಕುಸಿದಿದೆ. ಈ ವೇಳೆ ಬರುತ್ತಿದ್ದ ಲಾರಿ ನದಿಯೊಳಗೆ ಬಿದ್ದಿದೆ. ಪೊಲೀಸರು ಹಾಗೂ ಮೀನುಗಾರರು ಆತನನ್ನು ರಕ್ಷಿಸಿದ್ದಾರೆ.
ಸೇತುವೆ(bridge) ಕುಸಿಯುವ ಪೂರ್ವದಲ್ಲಿ ಕಾರು ಹಾಗೂ ಬೈಕ್ ವೊಂದು ಚಲಿಸಿದೆ ಎಂದು ಹೇಳಲಾಗುತ್ತಿದೆ. ಲಾರಿಯ ಜೊತೆಗೆ ಬೇರೆ ಯಾವುದಾದೂರ ವಾಹನ ಬಿದ್ದಿರುವ ಬಗ್ಗೆ ಶೋಧ ನಡೆಸಲಾಗುತ್ತಿದೆ. ವಿಚಾರ ತಿಳಿದು ರಾತ್ರಿಯೇ ಶಾಸಕ ಸತೀಶ್ ಸೈಲ್, ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಎಸ್ಪಿ ಎಂ.ನಾರಾಯಣ್ ಸೇರಿದಂತೆ ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
1983ರಲ್ಲಿ ಈ ಸೇತುವೆ ನಿರ್ಮಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಮಾರ್ಗದಲ್ಲಿ 2 ಸೇತುವೆಗಳನ್ನು ನಿರ್ಮಿಸಲಾಗಿದೆ. ಈ ಸೇತುವೆ ಕರ್ನಾಟಕ ಹಾಗೂ ಗೋವಾ ನಡುವೆ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ಕಾರವಾರ ಮಾರ್ಗದಿಂದ ಗೋವಾಕ್ಕೆ(Goa) ಹೋಗುವುದು ಇದೇ ಮಾರ್ಗವಾಗಿ. ಈಗ ಸಂಚಾರ ಬಂದ್ ಮಾಡಲಾಗಿದೆ.