ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನು ವಿರುದ್ಧ ಅತ್ಯಾಚಾರ ದೂರು ದಾಖಲಾಗಿದೆ. ಅವರನ್ನು ಅನ್ನಪೂರ್ಣೇಶ್ವರ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇದರ ನಡುವೆ ಇನ್ನೋರ್ವ ಹಾಸ್ಯನಟ ಅಪ್ಪಣ್ಣ ರಾಮದುರ್ಗ ಮೇಲೆ ಕಿರುಕುಳ ಆರೋಪವನ್ನು ಸಹನಟಿ ಮಾಡಿದ್ದಾಳೆ. ಈ ಬಗ್ಗೆ ಆಡಿಯೋ ವೈರಲ್ ಆಗಿದೆ. ಕಾಮಿಡಿ ಕಿಲಾಡಿಗಳು ಸೀಸನ್ 2ರಿಂದಲೂ ನನಗೆ ಕಿರುಕುಳ ಕೊಡುತ್ತಿದ್ದಾನೆ. ಇದರಿಂದಾಗಿ ನನ್ನ ಬಾಯ್ ಫ್ರೆಂಡ್ ಜೊತೆಗೂ ಬಿರುಕು ಮೂಡಿದೆ. ನಾನೇನಾದರೂ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಅಪ್ಪಣ್ಣ ಕಾರಣ ಎಂದು ಹೇಳಿರುವ ಆಡಿಯೋ ವೈರಲ್ ಆಗಿದೆ.
ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ನಟ ಅಪ್ಪಣ್ಣ, ಯುವತಿ ಮಾಡಿರುವ ಆರೋಪ ಸುಳ್ಳು. ಒಂದೂವರೆ ವರ್ಷ ಹಿಂದಿನ ಹಳೆಯ ಆಡಿಯೋ ಅದು. ಅವರಿಬ್ಬರ ಜಗಳದಲ್ಲಿ ನನ್ನ ಹೆಸರು ತಂದಿದ್ದಾರೆ. ನನ್ನ ಜೊತೆಗೆ ಶೋ ಮಾಡಬಾರದು ಎಂದು ಮನು ಆಡಿಯೋ ಮಾಡಿಸಿರುವುದು. ನಾನು ಯಾವುದೇ ರೀತಿ ಕಿರುಕುಳ ನೀಡಿಲ್ಲ. ಈ ಬಗ್ಗೆ ಆಕೆಯ ಬಳಿಯೇ ಮಾಹಿತಿ ಸಿಗುತ್ತೆ ಎಂದಿದ್ದಾನೆ. ಈ ಒಂದು ಘಟನೆ ಕಾಮಿಡಿ ಕಿಲಾಡಿಗಳು ಶೋನ ಕಲಾವಿದರ ಕುರಿತು ಸಾರ್ವಜನಿಕರಲ್ಲಿ ಹಲವು ರೀತಿಯ ಪ್ರಶ್ನೆಗಳು ಮೂಡಿವೆ.