ಪ್ರಜಾಸ್ತ್ರ ಸುದ್ದಿ
ಚಿತ್ರದುರ್ಗ(Chitradurga): ಮನರಂಜನಾ ಶೋವೊಂದರ ವೇದಿಕೆ ಮೇಲೆ ಭೋವಿ ಸಮುದಾಯದ ವಿರುದ್ಧ ಅಗೌರವದಿಂದ ಮಾತನಾಡಿದ್ದಾರೆ ಎಂದು ಹಾಸ್ಯನಟ(Comedy Actor) ಹುಲಿ ಕಾರ್ತಿಕ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇವರು ಮಾತ್ರವಲ್ಲ, ಸ್ಕ್ರಿಪ್ಟ್ ರೈಟರ್, ಕಾರ್ಯಕ್ರಮದ ಮುಖ್ಯಸ್ಥರು ಸೇರಿ ಇತರರ ವಿರುದ್ಧ ಎಫ್ಐಆರ್(FIR) ದಾಖಲಿಸಲಾಗಿದೆ. ಹೀಗಾಗಿ ಹಾಸ್ಯನಟ ಚಿತ್ರದುರ್ಗದಲ್ಲಿರುವ ಭೋವಿ ಮಠಕ್ಕೆ ಭೇಟಿ ನೀಡಿ, ಇಮ್ಮಡಿ ಸಿದ್ದರಾಮೇಶ್ವರಿ ಸ್ವಾಮೀಜಿ ಕಾಲಿಗೆ ನಮಸ್ಕರಿಸಿ ಕ್ಷಮೆ ಕೇಳಿದ್ದಾರೆ.
ಬಡತನದಿಂದ ಬಂದಿದ್ದೇನೆ. ಈಗ ತಾನೆ ಬೆಳೆಯುತ್ತಿದ್ದೇನೆ. ಎಫ್ಐಆರ್ ಆದರೆ ನನ್ನ ಜೀವನ ಹಾಳಾಗುತ್ತೆ ಎಂದು ಮನವಿ ಮಾಡಿದ್ದಾನೆ. ನಾವು ಆ ವಿಡಿಯೋ, ಆಡಿಯೋ ನೋಡಿದ್ದೇವೆ. ಅದರಲ್ಲಿ ತಾವು ಆ ರೀತಿ ಮಾತನಾಡಿಲ್ಲ. ಅದು ನಮ್ಮ ಗಮನಕ್ಕೆ ಬಂದಿದೆ. ನಮ್ಮ ಮಠದಿಂದ, ಭಕ್ತರಿಂದ ಯಾವುದೇ ತೊಂದರೆಯಾಗುವುದಿಲ್ಲ. ನಮ್ಮ ಭಕ್ತರಿಗೆ ಹೇಳಿದ್ದೇವೆ. ಬಡವರ ಮಕ್ಕಳು ಬೆಳೆಯಬೇಕು. ನಿಮಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.