ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಪಟ್ಟಣದ ಹೆಸರಾಂತ ವೈದ್ಯರಾದ ಡಾ.ಇಲಿಯಾಸ್ ಜಾಲಗೇರಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳ ಬಳಗದಿಂದ ಶ್ರೀಮಾತಾ ಸ್ಪರ್ಧಾ ತರಬೇತಿ ಕೇಂದ್ರ ಹಾಗೂ ಸರ್ಕಾರಿ ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ನೋಟ್ ಬುಕ್(Competitive books)ವಿತರಿಸಲಾಯಿತು. ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪತ್ರಕರ್ತ ಇಸ್ಮಾಯಿಲ್.ಎಮ್ ಶೇಖ್, ಸಿಂದಗಿ ನಗರದಲ್ಲಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಜನರ ಸೇವೆ ಮಾಡುತ್ತಿರುವ ವೈದ್ಯರಾದ ಇಲಿಯಾಸ್ ಜಾಲಗೇರಿ ಅವರ ಹುಟ್ಟುಹಬ್ಬವನ್ನು ನಾವು ನಮ್ಮ ತಂಡದಿಂದ ಪ್ರತಿ ವರ್ಷವು ಸಾಮಾನ್ಯ ಜನರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡುವ ಮುಖಾಂತರ ಆಚರಿಸುತ್ತೇವೆ ಎಂದರು.
ಆಡಂಬರದ ಹುಟ್ಟು ಹಬ್ಬ ಆಚರಣೆ ಬೇಡವೆಂದು ನಾವು ನಮ್ಮ ಸ್ವಯಚೆಯಿಂದ ಈ ನಿರ್ಧಾರ ತೆಗೆದುಕೊಂಡು, ನಗರದ ಶ್ರೀಮಾತಾ ಸ್ಪರ್ಧಾ ತರಬೇತಿ ಕೇಂದ್ರ ಹಾಗೂ ಸರ್ಕಾರಿ ಅಲ್ಪಸಂಖ್ಯಾತರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪುಸ್ತಕ ಹಾಗೂ ನೋಟ್ ಬುಕ್ ವಿತರಿಸುವ ಕಾರ್ಯಕ್ರಮ ಮಾಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಶ್ರೀಮಾತಾ ಸ್ಪರ್ಧ ತರಬೇತಿ ಕೇಂದ್ರದ ಮುಖ್ಯಸ್ಥರಾದ ಶ್ರೀಕಾಂತ ಎಸ್ ಬೋನಾಳ, ಪತ್ರಕರ್ತರಾದ ಆರೀಫ್ ಅಂತರಗಂಗಿ, ಶಹಾಜಹನ್ ಗೋಲಗೇರಿ, ಪುಟ್ಟು ಸಾಲೋಟಗಿ, ಅಕ್ರಮ್ ಮುರಡಿ ಸೇರಿ ಇತರರು ಉಪಸ್ಥಿತರಿದ್ದರು.