Ad imageAd image

ಸಿಂದಗಿ: ಆರ್.ಡಿ ಪಾಟೀಲ ಕಾಲೇಜಿಗೆ ಸಮಗ್ರ ವೀರಾಗ್ರಣೆ ಪ್ರಶಸ್ತಿ

Nagesh Talawar
ಸಿಂದಗಿ: ಆರ್.ಡಿ ಪಾಟೀಲ ಕಾಲೇಜಿಗೆ ಸಮಗ್ರ ವೀರಾಗ್ರಣೆ ಪ್ರಶಸ್ತಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಮಹಾವಿದ್ಯಾಲಯಗಳ ತಾಲೂಕಾ ಮಟ್ಟದ ಗುಂಪು ಆಟಗಳಲ್ಲಿ ಬಾಲಕರ ಕಬಡ್ಡಿ ಪ್ರಥಮ, ಬಾಲಕರ ವ್ಹಾಲಿಬಾಲ್ ಪ್ರಥಮ, ಬಾಲಕಿಯರ ಕಬಡ್ಡಿ ಪ್ರಥಮ, ಬಾಲಕಿಯರ ಖೋಖೋ ಪ್ರಥಮ, ಬಾಲಕರ ಟೆನಿಕ್ವಾಯಿಟ್ ಪ್ರಥಮ ಹಾಗೂ ಬಾಲಕಿಯರ ಟೆನಿಕ್ವಾಯಿಟ್ ದ್ವಿತೀಯ, ಬಾಲಕರ ಖೋಖೋ ದ್ವಿತೀಯ ಸ್ಥಾನಗಳನ್ನು ಪಟ್ಟಣದ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ 45 ವಿದ್ಯಾರ್ಥಿಗಳು ಸಮಗ್ರ ವೀರಾಗ್ರಣೆ ಪ್ರಶಸ್ತಿಯನ್ನು ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇವರ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು, ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಆಡಳಿತ ಮಂಡಳಿಯ ಸರ್ವ ಸದಸ್ಯರು, ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ, ಉಪಪ್ರಾಚಾರ್ಯ ಪಿ.ವ್ಹಿ.ಮಹಲಿನಮಠ, ಎಸ್.ಎಚ್.ಜಾಧವ, ಎನ್.ಬಿ.ಪೂಜಾರಿ, ಬಿ.ಬಿ.ಜಮಾದಾರ, ಪ್ರಸನ್ನ ಜೋಗೂರ, ಶಿವಶರಣ ಬೂದಿಹಾಳ, ಎನ್.ಎಂ.ಶೆಳ್ಳಗಿ, ರೋಹಿತ ಸುಲ್ಪಿ, ರಾಹುಲ ನಾರಾಯಣಕರ್, ಸುನೀಲ ಪಾಟೀಲ, ದೈಹಿಕ ಉಪನ್ಯಾಸಕ ಗವಿಸಿದ್ದಪ್ಪ ಆನೆಗುಂದಿ, ಶಿವರಾಜ ಕುಂದಗೋಳ, ರಾಹುಲ ದಾಸರ, ಉದಯ ಶಿವಸಿಂಪಿಗೇರ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.

WhatsApp Group Join Now
Telegram Group Join Now
Share This Article