ಪ್ರಜಾಸ್ತ್ರ ಸುದ್ದಿ
ರಾಂಚಿ: 81 ಕ್ಷೇತ್ರಗಳ ಜಾರ್ಖಂಡ್(Jharkhand) ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿರುವ ಮುಖ್ಯಮಂತ್ರಿ ಹೇಮಂತ್ ಸೂರೇನ್, ಆಡಳಿತರೂಢ(JMM) ಜೆಎಂಎಂ(ಜಾರ್ಖಂಡ್ ಮುಕ್ತಿ ಮೋರ್ಚಾ) ಹಾಗೂ ಕಾಂಗ್ರೆಸ್(Congress) 70 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ನಮ್ಮ ನಾಯಕ ಬಂದ ಬಳಿಕ ಸ್ಥಾನಗಳ ಹಂಚಿಕೆ ಬಗ್ಗೆ ಚರ್ಚಿಸುತ್ತೇವೆ ಎಂದು ಶನಿವಾರ ಹೇಳಿದ್ದಾರೆ.
11 ಸ್ಥಾನಗಳಲ್ಲಿ ಯಾರು ಸ್ಪರ್ಧಿಸಬೇಕು ಎನ್ನುವುದರ ಕುರಿತು ಆರ್ ಜೆಡಿ(RJD) ಹಾಗೂ ಎಡ ಪಕ್ಷಗಳೊಂದಿಗೆ ಚರ್ಚಿಸಲಾಗುವುದು ಎಂದಿದ್ದಾರೆ. ಕಳೆದ ಬಾರಿ ಜೆಎಂಎಂ 43 ಹಾಗೂ ಕಾಂಗ್ರೆಸ್ 31 ಸ್ಥಾನಗಳೊಂದಿಗೆ 74 ಕ್ಷೇತ್ರಗಳಲ್ಲಿ ಇವರಿಬ್ಬರು ಸ್ಪರ್ಧಿಸಿದ್ದರು. ಈ ಬಾರಿ ಯಾರಿಗೆ ಎಷ್ಟು ಕ್ಷೇತ್ರಗಳು ಅನ್ನೋದು ಶೀಘ್ರದಲ್ಲಿ ಪ್ರಕಟವಾಗಲಿದೆ.