ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaluru): ಅಕ್ರಮವಾಗಿ ಆನ್ಲೈನ್ ಬೆಟ್ಟಿಂಗ್ ಕಂಪನಿ ನಡೆಸುತ್ತಿದ್ದ ಪ್ರಕರಣ ಸಂಬಂಧ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರನ್ನು ಶನಿವಾರ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಸಿಕ್ಕಿಂನ ಗ್ಯಾಂಗ್ಟಕ್ ನಲ್ಲಿ ಬಂಧಿಸಲಾಗಿದೆ. ನಾಲ್ಕು ವಾಹನಗಳು, 17 ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ.
ಕಳೆದ ಎರಡು ದಿನಗಳಿಂದ ಇವರ ಮನೆಗಳು, ಕಚೇರಿ ಎಲ್ಲೆಡೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ. ಚಿತ್ರದುರ್ಗ 6, ಬೆಂಗಳೂರು 10, ಗೋವಾ 5, ಮುಂಬೈ, ಸಿಕ್ಕಿಂ 5, ಹುಬ್ಬಳ್ಳಿ, ಜೋಧಪುರನ ಒಂದೊಂದು ಕಡೆ ದಾಳಿ ಮಾಡಲಾಗಿದೆ. 1 ಕೋಟಿ ವಿದೇಶಿ ಸೇರಿ 12 ಕೋಟಿ ನಗದು ಹಾಗೂ 6 ಕೋಟಿ ಮೌಲ್ಯದ ಚಿನ್ನಾಭರಣಗಳು ವಶಕ್ಕೆ ಪಡೆಯಲಾಗಿದೆ.