ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ವಿರುದ್ಧ ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಮಾಡಿರುವ ಪೋಸ್ಟ್ ವಿವಾದ ಪಡೆದುಕೊಂಡಿದೆ. ಎಕ್ಸ್ ಖಾತೆಯಲ್ಲಿ ಶಮಾ ಮೊಹಮ್ಮದ್, ರೋಹಿತ್ ಶರ್ಮಾ ದಪ್ಪಗಿದ್ದಾರೆ. ತೂಕ ಕಳೆದುಕೊಳ್ಳಬೇಕಿದೆ. ಭಾರತ ಕಂಡ ಅತ್ಯಂತ ಪ್ರಭಾವಶಾಲಿಯಲ್ಲ ನಾಯಕ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಇದು ದುರದುಷ್ಟಕರ ಹೇಳಿಕೆ ಎಂದಿದೆ.
ಇನ್ನು ಶಮಾ ಹೇಳಿಕೆ ವೈಯಕ್ತವಾದದ್ದು. ಇದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ. ಪೋಸ್ಟ್ ಅಳಿಸಿ ಹಾಕಲು ಸೂಚಿಸಲಾಗಿದೆ. ಇಲ್ಲದಿದ್ದರೆ ಮುಂದೆ ಎಚ್ಚರಿಕೆ ಅನುಭವಿಸಬೇಕು ಎಂದು ಕಾಂಗ್ರೆಸ್ ಮಾಧ್ಯಮ ಹಾಗೂ ಪ್ರಚಾರದ ವಿಭಾಗದ ಮುಖ್ಯಸ್ಥರು ತಿಳಿಸಿದ್ದಾರೆ.