ಪ್ರಜಾಸ್ತ್ರ ಸುದ್ದಿ
ಮುಲ್ಲನಪುರ(ನ್ಯೂ ಚಂಡೀಗಡ): ಐಪಿಎಲ್ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಭರ್ಜರಿ ಗೆಲುವು ದಾಖಲಿಸಿದೆ. ಪಾದಾರ್ಪಣೆಯ ಪಂದ್ಯದಲ್ಲಿಯೇ ಆಸ್ಟ್ರೇಲಿಯಾ ಮೂಲದ 22 ವರ್ಷದ ಕೂಪರ್ ಕನೊಲಿ ಅಬ್ಬರಿಸಿದ್ದಾರೆ. 5 ಸಿಕ್ಸ್, 5 ಫೋರ್ ಗಳೊಂದಿಗೆ 44 ಬೌಲ್ ಗಳಲ್ಲಿ ಅಜೇಯ 72 ರನ್ ಗಳಿಸಿದರು.
ಮೊದಲು ಬ್ಯಾಟ್ ಮಾಡಿದ ಶುಭನಂ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ 6 ವಿಕೆಟ್ ನಷ್ಟಕ್ಎಕ 162 ರನ್ ಗಳಿಸಿತು. ಗಿಲ್ 39, ಬಟ್ಲರ್ 38, ಫಿಲಿಪ್ಸ್ 25 ರನ್ ಗಳಿಸಿದರು. ಪಂಜಾಬ್ ಪರ ವಿಜಯಕುಮಾರ್ ವೈಶಾಕ್ 3 ವಿಕೆಟ್ ಪಡೆದು ಮಿಂಚಿದರು. ಚಾಯಲ್ 2 ವಿಕೆಟ್ ಕಿತ್ತಿ ಸಾಥ್ ನೀಡಿದರು. ಮಾರ್ಕ್ ಜಾನ್ಸನ್ 1 ವಿಕೆಟ್ ಪಡೆದರು.
163 ರನ್ ಗಳ ಗುರಿ ಮುಟ್ಟಲು ಪಂಜಾಬ್ ಸಹ 19.1 ಓವರ್ ಗಳನ್ನು ತೆಗೆದುಕೊಂಡಿತು. ಈ ವೇಳೆ 7 ವಿಕೆಟ್ ಗಳನ್ನು ಸಹ ಕಳೆದುಕೊಂಡಿತು. ಕನೊಲಿ ಅಜೇಯ 72, ಪ್ರಭಾಸಿಮ್ರನ್ ಸಿಂಗ್ 37 ರನ್ ಗಳಿಸಿದರು. ನಾಯಕ ಶ್ರೇಯಸ್ ಅಯ್ಯರ್ 18 ರನ್ ಗಳಿಸಿ ವಿಫಲರಾದರು. ಕನೊಲಿ ಪ್ಲೇಯರ್ ಆಫ್ ದಿ ಮ್ಯಾಚ್ ಆದರು. ಗುಜರಾತ್ ಪರ ಪ್ರಸಿದ್ಧ ಕೃಷ್ಣ 3 ವಿಕೆಟ್ ಪಡೆದು ಸಂಭ್ರಮಿಸಿದರು. ರಬಡಾ, ಅಶೋಕ ಶರ್ಮಾ, ರಶಿದ್ ಖಾನ್ ಹಾಗೂ ವಾಷಿಂಗ್ಟನ್ ಸುಂದರ್ ತಲಾ 1 ವಿಕೆಟ್ ಪಡೆದರು.




