ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಸಂವಿಧಾನ ದಿನದ ಹಿನ್ನಲೆಯಲ್ಲಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಭಾರತದ ಸಂವಿಧಾನ ಕೇಲವ ಪುಸ್ತಕವಲ್ಲ. ದೇಶದ ಪ್ರತಿಯೊಬ್ಬ ಪ್ರಜೆಗೂ ನೀಡಿದ ಪವಿತ್ರ ವಾಗ್ದಾನವಾಗಿದೆ. ಇದು ಯಾವುದೇ ಧರ್ಮ, ಜಾತಿಗೆ ಸೇರಿಲ್ಲ. ಎಲ್ಲರಿಗೂ ಸಮಾನತೆ, ಗೌರವ ಹಾಗೂ ನ್ಯಾಯ ಸಿಗುತ್ತದೆ. ಅದನ್ನು ರಕ್ಷಿಸುವುದು ನಮ್ಮ ಕರ್ತವ್ಯ ಅಂತಾ ಹೇಳಿದ್ದಾರೆ.
ಸಂವಿಧಾನದ ಮೇಲೆ ದಾಳಿ ಮಾಡಲು ಬಿಡುವುದಿಲ್ಲ. ಇದು ಬಡವರ ರಕ್ಷಣಾ ಗುರಾಣಿ. ಜನರ ಶಕ್ತಿ, ರಕ್ಷಣೆ ಹಾಗೂ ಧ್ವನಿಯಾಗಿದೆ ಎಂದು ಬರೆದಿದ್ದಾರೆ. ದೇಶದ ಏಕತೆ ಮತ್ತು ಸಮಗ್ರತೆಗಾಗಿ, ಪ್ರೀತಿ, ಸಹೋದರತ್ವ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಕಾಪಾಡುತ್ತೇವೆ ಎಂದು ನಾವೆಲ್ಲ ಪ್ರತಿಜ್ಞೆ ಮಾಡೋಣ ಎಂದಿದ್ದಾರೆ.




