ಕಲುಷಿತ ನೀರು ಸೇವನೆ, 6 ಜನರ ಸಾವು

86

ಪ್ರಜಾಸ್ತ್ರ ಸುದ್ದಿ

ತುಮಕೂರು: ಕಲುಷಿತ ನೀರು ಸೇನವೆಯಿಂದ 6 ಜನರು ಮೃತಪಟ್ಟ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಚಿನ್ನೇನಹಳ್ಳಿಯಲ್ಲಿ ಬುಧವಾರ ನಡೆದಿದೆ. ಇಂದು ಜಿಲ್ಲಾಸ್ಪತ್ರೆಗೆ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ್ ಭೇಟಿ ಕೊಟ್ಟು, ರೋಗಿಗಳ ಆರೋಗ್ಯ ವಿಚಾರಿಸಿದರು.

ಜೂನ್ 10ರಂದು ಹನುಮಕ್ಕ(85), ಜೂನ್ 11ರಂದು ನಾಗಪ್ಪ(85), ನಾಗಮ್ಮ(90) ಚಿನ್ನೇನಹಳ್ಳಿಯಲ್ಲಿ ಮೃತಪಟ್ಟಿದ್ದಾರೆ. ಇನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿಕ್ಕದಾಸಪ್ಪ(76), ಪೆದ್ದಣ್ಣ(74), ಮಧುಗಿರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 3 ವರ್ಷದ ಬಾಲಕಿ ಮೀನಾಕ್ಷಿ ಬುಧವಾರ ಮೃತಪಟ್ಟಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

ವೃದ್ಧರಾದ ಹನುಮಕ್ಕ, ನಾಗಪ್ಪ, ನಾಗಮ್ಮ ಸಾವಿಗೆ ವಯೋಸಹಜ ಕಾಯಿಲೆ ಕಾರಣವೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ನೀರು ಸೇವನೆ ಬಳಿಕ ವಾಂತಿ, ಬೇಧಿಯಿಂದ ಮೃತಪಟ್ಟಿದ್ದಾರೆ ಎನ್ನುವುದು ಗ್ರಾಮಸ್ಥರ ವಾದ. ಘಟನೆ ಸಂಬಂಧ ಚಿನ್ನೇನಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಒ ಹಾಗೂ ವ್ಯಾಟರ್ ಮ್ಯಾನ್ ಇಬ್ಬರನ್ನು ಅಮಾನತುಗೊಳಿಸಲಾಗಿದೆ.
error: Content is protected !!