ಪ್ರಜಾಸ್ತ್ರ ಸುದ್ದಿ
ಜೆರುಸಲೇಂ(Jerusalem): ಇರಾನ್ ಹಾಗೂ ಇಸ್ರೇಲ್ ನಡುವೆ ಸಂಘರ್ಷ ಮುಂದುವರೆದಿದೆ. 3ನೇ ಕದನ ಕಾಲಿಟ್ಟಿದ್ದು, 230ಕ್ಕೂ ಹೆಚ್ಚು ಜನರ ಸಾವು ಸಂಭವಿಸಿದೆ ಎಂದು ತಿಳಿದು ಬಂದಿದೆ. 1,277ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಇರಾನ್ ತೈಲ್ ಘಟಕಗಳು, ರಕ್ಷಣಾ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ. ಇದಕ್ಕೆ ಇರಾನ್ ಕೂಡ ಪ್ರತಿ ದಾಳಿ ನಡೆಸುತ್ತಿದೆ.
ಸೋಮವಾರ ಟೆಹರಾನ್ ನ ಹಲವು ಕಡೆಗಳಲ್ಲಿ ಸ್ಫೋಟಗಳು ನಡೆದಿವೆ. ವೈಮಾನಿಕ ದಾಳಿಗಳನ್ನು ಸಹ ಮಾಡಲಾಗುತ್ತಿದೆ. ಇಸ್ರೇಲ್ ತನ್ನ ಅರೆಸೈನಿಕ ಕ್ರಾಂತಿಕಾರಿ ಗಾರ್ಡನ್ ಗುಪ್ತಚರ ಮುಖ್ಯಸ್ಥ ಹಾಗೂ ಇಬ್ಬರು ಜನರಲ್ ಗಳನ್ನು ಹತ್ಯೆ ಮಾಡಿದೆ ಎಂದು ಇರಾನ್ ಹೇಳಿದೆ. ಆಪರೇಷನ್ ರೈಸಿಂಗ್ ಲಯನ್ ಹೆಸರಿನಡಿಯಲ್ಲಿ ಇಸ್ರೇಲ್ ದಾಳಿ ನಡೆಸುತ್ತಿದೆ. ಈ ವೇಳೆ ಇರಾನ್ ದೇಶದ ರಕ್ಷಣಾ ಪಡೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಸಾವನ್ನಪ್ಪಿದ್ದಾರೆ. ಇಸ್ರೇಲ್ ಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಇರಾನ್ ಪರಮೋಚ್ಛ ನಾಯಕ ಆಯಾತೊಲ್ಲಾ ಅಲಿ ಖಮೇನಿ ಎಚ್ಚರಿಕೆ ನೀಡಿದ್ದಾರೆ.