Ad imageAd image

ಕೆಲಸ ಕಳೆದುಕೊಂಡ ವಿವಾದಿತ ಐಎಎಸ್ ಪ್ರೊಬೇಷನರಿ ಪೂಜಾ ಖೇಡ್ಕರ್

ಮಹಾರಾಷ್ಟ್ರ ಮೂಲದ ಡಾ.ಪೂಜಾ ಖೇಡ್ಕರ ಐಎಎಸ್ ಹುದ್ದೆಯನ್ನು ಅನೂರ್ಜಿತಗೊಳಿಸಲಾಗಿದೆ. ಅಲ್ಲದೆ ಇನ್ನು ಮುಂದೆ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಯಾವುದೇ ಪರೀಕ್ಷೆಗಳನ್ನು ಬರೆಯುವಂತಿಲ್ಲ

Nagesh Talawar
ಕೆಲಸ ಕಳೆದುಕೊಂಡ ವಿವಾದಿತ ಐಎಎಸ್ ಪ್ರೊಬೇಷನರಿ ಪೂಜಾ ಖೇಡ್ಕರ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಮಹಾರಾಷ್ಟ್ರ ಮೂಲದ ಡಾ.ಪೂಜಾ ಖೇಡ್ಕರ್(pooja khedkar) ಐಎಎಸ್ ಹುದ್ದೆಯನ್ನು ಅನೂರ್ಜಿತಗೊಳಿಸಲಾಗಿದೆ. ಅಲ್ಲದೆ ಇನ್ನು ಮುಂದೆ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಯಾವುದೇ ಪರೀಕ್ಷೆಗಳನ್ನು ಬರೆಯುವಂತಿಲ್ಲ ಎಂದು ಕೇಂದ್ರ ಲೋಕಸೇವಾ ಆಯೋಗ ಇಂದು ತಿಳಿಸಿದೆ. ಪೂಜಾ ವಿರುದ್ಧ ಅಂಗವೈಕಲ್ಯ ಹಾಗೂ ಒಬಿಸಿ(OBC) ಕೋಟಾ ದುರುಪಯೋಗ ಪಡೆಸಿಕೊಂಡ ದೂರು ದಾಖಲಾಗಿತ್ತು. ಇದರ ಬಗ್ಗೆ ತನಿಖೆ ನಡೆಸಿದಾಗ ಅವರ ಮೇಲಿನ ಆರೋಪಗಳು ಸಾಬೀತಾಗಿವೆ.

2023ನೇ ಸಾಲಿನ ಐಎಎಸ್(IAS) ಅಧಿಕಾರಿಯಾಗಿದ್ದ ಪೂಜಾ ಖೇಡ್ಕರ್ ಹಲವು ಬಾರಿಗೆ ತಮಗೆ ಇರುವ ಮೀತಿಗಳನ್ನು ಮೀರಿ ವರ್ತಿಸುತ್ತಿದ್ದರು. ಪ್ರೊಬೇಷನರಿ ಸಂದರ್ಭದಲ್ಲಿಯೇ ಒಂದಲ್ಲ ಒಂದು ವಿವಾದ ಮಾಡಿಕೊಂಡು ವಾಸೀಂ ಜಿಲ್ಲೆಗೆ ವರ್ಗಾವಣೆಯಾಗಿದ್ದರು. ತಾವು ಭಾಗಶಃ ಅಂಗವೈಕಲ್ಯದಿಂದ ಬಳಲುತ್ತಿದ್ದೇನೆ ಎಂದು ಕೇಂದ್ರ ಲೋಕಸೇವಾ(UPSC) ಆಯೋಗಕ್ಕೆ ಸಲ್ಲಿಸಿದ್ದ ವೈದ್ಯಕೀಯ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದ್ದರೂ ಮಾಡಿರಲಿಲ್ಲ. ಇದೀಗ ಹುದ್ದೆಯನ್ನು ಕಳೆದುಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೆ ಮತ್ತೆಂದೂ ಯುಪಿಎಸ್ ಸಿ ಪರೀಕ್ಷೆಗಳನ್ನು ಬರೆಯುವಂತಿಲ್ಲವೆಂದು ಹೇಳಿರುವುದು ಬಹುದೊಡ್ಡ ಶಿಕ್ಷೆ ನೀಡಿದಂತಾಗಿದೆ. ಇನ್ನು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಇವರ ತಾಯಿ ಎದುರಾದರ ಮೇಲೆ ಗನ್ ತೋರಿಸಿ ಜೀವ ಬೆದರಿಕೆ ಹಾಕಿದ ಸಂಬಂಧ ಸಹ ಕೇಸ್ ಆಗಿದೆ.

WhatsApp Group Join Now
Telegram Group Join Now
Share This Article