ಪ್ರಜಾಸ್ತ್ರ ಸುದ್ದಿ
ಕೋಲಾರ(Kolara): ಮನೆಯವರು ವಿರೋಧ ವ್ಯಕ್ತಪಡಿಸಿದರೆಂದು ವಿಷ ಸೇವಿಸಿ ಜೋಡಿಯೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ನಡೆದಿದೆ. ಅಪ್ರಾಪ್ತೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಯುವಕನ ಸ್ಥಿತಿ ಗಂಭೀರವಾಗಿದೆ. ನಿಡುಮಾಕನಹಳ್ಳಿ ಗ್ರಾಮದ ರಶ್ಮಿ(16) ಎನ್ನುವ ಅಪ್ರಾಪ್ತೆ ಮೃತಪಟ್ಟಿದ್ದಾಳೆ. ಹಾಲೇರಿ ಗ್ರಾಮದ ಅಭಿಷೇಕ್(20) ಸ್ಥಿತಿ ಗಂಭೀರವಾಗಿದೆ.
ತಮಿಳುನಾಡು ಗಡಿಯಲ್ಲಿರುವ ಅರಣ್ಯ ಪ್ರದೇಶದಲ್ಲಿ ವಿಷ ಸೇವಿಸಿದ್ದಾರೆ. ಬಾಲಕಿ ಮೃತಪಟ್ಟಿದ್ದಾನೆ. ಹುಡುಗನ ಸ್ಥಿತಿ ಚಿಂತಾಜನಕವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಸ್ತಿ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.