ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ಜಾಮೀನು ತೀರ್ಪನ್ನು 57ನೇ ಸಿಟಿ ಸಿವಿಲ್ ಕೋರ್ಟ್ ಅಕ್ಟೋಬರ್ 14ಕ್ಕೆ ಕಾಯ್ದಿರಿಸಿದೆ. ಈ ಮೂಲಕ ನಟ ದರ್ಶನ್ ಬಿಡುಗಡೆ ಭಾಗ್ಯ ಸಧ್ಯಕ್ಕೆ ಇಲ್ಲವೆಂದು ಹೇಳಬಹುದು. ಬುಧವಾರ ಎಸ್ ಪಿಪಿ ವಾದಕ್ಕೆ ಇಂದು ದರ್ಶನ್ ಪರ ವಕೀಲರಾದ ಸಿ.ವಿ ನಾಗೇಶ್ ಪ್ರತಿವಾದ ಮಾಡಿದರು.
ಕೃತ್ಯ ನಡೆದ ಸ್ಥಳದಲ್ಲಿ ದರ್ಶನ್ ಇದ್ದರು ಎಂದು ಮೊಬೈಲ್ ಟವರ್ ಲೊಕೇಶನ್ ಮೇಲೆ ಸಾಕ್ಷಿ ಎಂದು ಹೇಳಿದ್ದಾರೆ. ಆದರೆ, ಇದು ಇದು ಗೂಗಲ್ ಪಿಕ್ಚರ್ ಅಲ್ಲ, ಸ್ಯಾಟ್ ಲೈಟ್ ಪಿಕ್ಚರ್ ಅಲ್ಲ. ನಾನು ನಿನ್ನೆ ಇಲ್ಲೆ ಇದ್ದು ವಾದ ಕೇಳಿಸಿಕೊಂಡಿದ್ದೇನೆ. ನಾನು ಹೈಕೋರ್ಟ್ ನಲ್ಲಿ ಇದ್ದೆ ಎಂದು ತೋರಿಸಬಹುದು. ಇದೇ ರೀತಿ ಈ ಮ್ಯಾಪ್ ನಲ್ಲಿ ದರ್ಶನ್ ಫೋಟೋ ಅಂಟಿಸಿದ್ದಾರೆ ವಾದ ಮಾಡಿದರು. ತನಿಖಾಧಿಕಾರಿಗಳು ಏನು ಹೇಳಿದ್ದಾರೋ ಅದನ್ನು ಬರೆದಿದ್ದೇನೆ ಎಂದು ಹೆಡ್ ಕಾನ್ಸ್ ಟೇಬಲ್ ಹೇಳಿದ್ದಾರೆ ಎನ್ನುವುದು ಸೇರಿದಂತೆ ಮತ್ತೆ ಅನೇಕ ಪ್ರಶ್ನೆಗಳು ಎತ್ತುವ ಮೂಲಕ ಚಾರ್ಜ್ ಶೀಟ್ ನಲ್ಲಿ ಲೋಪಗಳಿವೆ. ನನ್ನ ಕಕ್ಷಿದಾರನಿಗೆ ಜಾಮೀನು ನೀಡಬೇಕು ಎಂದರು.
ಸಿ.ವಿ ನಾಗೇಶ್ ವಾದಕ್ಕೆ ಎಸ್ ಪಿಪಿ ಪ್ರಸನ್ನಕುಮಾರ್ ಪ್ರತಿವಾದ ಮಂಡಿಸಲು ನ್ಯಾಯಾಧೀಶರಿಗೆ ಕೇಳಿದರು. ಇದಕ್ಕೆ ಸಿ.ವಿ ನಾಗೇಶ್ ಆಕ್ಷೇಪ ಎತ್ತಿದರು. ಆದರೆ ನ್ಯಾಯಾಧೀಶರು ಅವಕಾಶ ನೀಡಿದರು. ಆಗ ಕೋರ್ಟ್ ನಿಂದ ನಾಗೇಶ್ ಹೋದರು. ಸಿಪಿಪಿ ಪ್ರಸನ್ನಕುಮಾರ್ ವಾದ ಮುಂದುವರೆಸಿದರು. ಇದೆಲ್ಲವನ್ನು ಆಲಿಸಿದ ನ್ಯಾಯಾಧೀಶರ ಜಾಮೀನು ತೀರ್ಪನ್ನು ಅಕ್ಟೋಬರ್ 14 ಸೋಮವಾರಕ್ಕೆ ಕಾಯ್ದಿರಿಸಿದರು. ಎ1 ಆರೋಪಿ ಪವಿತ್ರಾಗೌಡ ಸೇರಿ ಐವರ ಆರೋಪಿಗಳ ಜಾಮೀನು ತೀರ್ಪು ಸಹ ಅಕ್ಟೋಬರ್ 14ಕ್ಕೆ ಕಾಯ್ದಿರಿಸಲಾಗಿದೆ.