Ad imageAd image

ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: 3 ಹಸು ಕೊಡಿಸಿದ ಸಚಿವ ಜಮೀರ್

Nagesh Talawar
ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: 3 ಹಸು ಕೊಡಿಸಿದ ಸಚಿವ ಜಮೀರ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಸಿಲಿಕಾನ್ ಸಿಟಿಯಲ್ಲಿ ಬಿಹಾರ ಮೂಲದ ಕ್ರೂರಿಯೊಬ್ಬ 3 ಹಸುಗಳ ಕೆಚ್ಚಲು ಕೊಯ್ದು ಪ್ರಕರಣ ದೊಡ್ಡ ಸದ್ದು ಮಾಡಿದೆ. ಈ ಸಂಬಂಧ ವಿಪಕ್ಷಗಳು ಪ್ರತಿಭಟನೆ ನಡೆಸಿವೆ. ಇದರ ನಡುವೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಹಸುಗಳ ಮಾಲೀಕರಿಗೆ ಮೂರು ಹಸುಗಳನ್ನು ಖರೀದಿಸಿ ನೀಡಿದ್ದಾರೆ. ಈ ಮೂಲಕ ಅನ್ಯಾಯಕ್ಕೆ ಒಳಗಾದ ಕುಟುಂಬದೊಂದಿಗೆ ನಾನು ಇರುತ್ತೇನೆ ಎಂದಿದ್ದಾರೆ.

ಹಸುಗಳ ಮಾಲೀಕ ಕರ್ಣ ಎಂಬುವರು ಸಚಿವರು ನೀಡಿದ ಹಸುಗಳನ್ನು ನಿರಾಕರಿಸಿದ್ದರು. ಆದರೆ, ಅವರ ತಾಯಿ ಸವರಿ ಅಮ್ಮಳ್, ಸಹೋದರಿ ಅಮುದಾ ಹಸುಗಳನ್ನು ಪಡೆದರು. ಈ ವೇಳೆ ಮಾತನಾಡಿದ ಸಹೋದರಿ ಅಮುದಾ, ಹಸುಗಳನ್ನು ಬೇಡ ಎಂದ ಸಹೋದರನ ಪರವಾಗಿ ಸಚಿವರಲ್ಲಿ ನಾನು ಕ್ಷಮೆ ಕೇಳುತ್ತೇನೆ. ಒಳ್ಳೆಯ ಮನಸ್ಸಿನಿಂದ ಜಮೀರಣ್ಣ ಹಸು ನೀಡಿದ್ದಾರೆ. ಇದರಲ್ಲಿ ರಾಜಕಾರಣ ಮಾಡಬೇಡಿ ಎಂದರು. ಚಾಮರಾಜಪೇಟೆಯ ವಿನಾಯಕನಗರದಲ್ಲಿ ಈ ಒಂದು ಘಟನೆ ನಡೆದಿದೆ. ಈ ಸಂಬಂಧ ಆರೋಪಿಯನ್ನು ಪೊಲೀಸರು ಈಗಾಗ್ಲೇ ಬಂಧಿಸಿದ್ದಾರೆ.

WhatsApp Group Join Now
Telegram Group Join Now
Share This Article