ಪ್ರಜಾಸ್ತ್ರ ಸುದ್ದಿ
ಹಾವೇರಿ(Haveri): ಜಿಲ್ಲೆಯ ಸವಣೂರಿನಲ್ಲಿರುವ ಸರ್ಕಾರಿ ಉರ್ದು ಶಾಲೆಯ ಶಿಕ್ಷಕ ಜಗದೀಶ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಡಿಸೆಂಬರ್ 10ರಂದು ಶಾಲೆಗೆ ನುಗ್ಗಿದ ಪೋಷಕರು, ಸ್ಥಳೀಯರು ಶಿಕ್ಷನಿಗೆ ಥಳಿಸಿದ್ದಾರೆ. ನಂತರ ಚಪ್ಪಲಿ ಹಾರ ಹಾಕಿ ನಗರದಲ್ಲಿ ಮೆರವಣಿಗೆ ಮಾಡಿದ್ದಾರೆ. ಈ ಪ್ರಕರಣ ಸಂಬಂಧ ಸವಣೂರು ಸಿಪಿಐ ಎಸ್.ದೇವಾನಂದ ಹಾಗೂ ಹೆಡ್ ಕಾನ್ಸ್ ಟೇಬಲ್ ಮಲ್ಲಿಕಾರ್ಜುನ ಒದನವರ ಅವರನ್ನು ಅಮಾನತುಗೊಳಿಸಲಾಗಿದೆ.
ಘಟನೆ ಬಗ್ಗೆ ಪ್ರಾಥಮಿಕ ಮಾಹಿತಿ ಪಡೆದ ಎಸ್ಪಿ ಯಶೋಧಾ ವಂಟಗೋಡಿ ಅವರು ದಕ್ಷಿಣ ವಲಯ ದಾವಣಗೆರೆ ಐಜಿಪಿ ಬಿ.ಆರ್ ರವಿಕಾಂತೇಗೌಡ ಅವರಿಗೆ ವರದಿ ಸಲ್ಲಿಸಿದ್ದರು. ಇದನ್ನು ಆಧರಿಸಿ ಸಿಪಿಐರನ್ನು ಅವಮಾನತುಗೊಳಿಸಿದ್ದಾರೆ. ಹೆಡ್ ಕಾನ್ಸ್ ಟೇಬಲ್ ರನ್ನು ಎಸ್ಪಿ ಅಮಾನತುಗೊಳಿಸಿದ್ದಾರೆ. ಈ ಘಟನೆಯನ್ನು ವಿವಿಧ ಸಂಘಟನೆಗಳು ಖಂಡಿಸಿದ್ದವು. ನೈತಿಕ ಪೊಲೀಸಗಿರಿ ಮಾಡಿದ್ದು ಎಷ್ಟು ಸರಿ? ಶಿಕ್ಷಕ ತಪ್ಪು ಮಾಡಿದ್ದರೆ ಶಿಕ್ಷೆ ನೀಡಲು ಪೊಲೀಸರು, ನ್ಯಾಯಾಲಯವಿದೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು.




