ಪ್ರಜಾಸ್ತ್ರ ಸುದ್ದಿ
ಹೈದರಾಬಾದ್(Hyderabad): ಹೋಟೆಲ್ ವೊಂದನ್ನು ಧ್ವಂಸಗೊಳಿಸಿದ ಪ್ರಕರಣ ಸಂಬಂಧ ನಟ ರಾಣಾ ದಗ್ಗುಬಾಟಿ, ನಟ ವೆಂಕಟೇಶ್ ದಗ್ಗುಬಾಟಿ, ನಿರ್ಮಾಪಕ ಡಿ.ಸುರೇಶ್ ಸೇರಿದಂತೆ ಇವರ ಕುಟುಂಬಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಸ್ಥಳೀಯ ನ್ಯಾಯಾಲಯದ ನಿರ್ದೇಶನದಂತೆ ದಗ್ಗುಬಾಟಿ ಕುಟುಂಬಸ್ಥರ ವಿರುದ್ಧ ಜನವರಿ 11ರಂದು ಎಫ್ಐಆರ್ ದಾಖಲಿಸಲಾಗಿದೆ.
ಫಿಲ್ಮ್ ನಗರದಲ್ಲಿರುವ ಫ್ಲಾಟ್ ನ್ನ ದಗ್ಗುಬಾಟಿ ಕುಟುಂಬಸ್ಥರು ಹೊಂದಿದ್ದಾರೆ. 2014ರಲ್ಲಿ ಇದನ್ನು ಗುತ್ತಿಗೆಗೆ ನೀಡಿದೆ. ಗುತ್ತಿಗೆ ಪಡೆದವರು ಅಲ್ಲಿ ಹೋಟೆಲ್ ಪ್ರಾರಂಭಿಸಿದ್ದರು. ಒಪ್ಪಂದದ ಪ್ರಕಾರ ಇನ್ನು ಅವಧಿ ಇರುವ ಮೊದಲೇ ಹೋಟೆಲ್ ಧ್ವಂಸಗೊಳಿಸಿದ್ದಾರೆ. ಕೋರ್ಟ್ ಮೂಲಕ ತಡೆಯಾಜ್ಞೆ ತಂದಿದ್ದರೂ ಹೋಟೆಲ್ ಕೆಡವಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ. ಇದೀಗ ಕೋರ್ಟ್ ನಿರ್ದೇಶನದಂತೆ ದಗ್ಗುಬಾಟಿ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ.