ಪ್ರಜಾಸ್ತ್ರ ಸುದ್ದಿ
ಚೆನ್ನೈ(Chennai): ಬುಧವಾರ ರಾತ್ರಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸೋಲುವ ಮೂಲಕ ಟೂರ್ನಿಯಿಂದ ಹೊರ ಬಿದ್ದ ಮೊದಲ ತಂಡವಾಗಿದೆ. ಐದು ಬಾರಿ ಚಾಂಪಿಯನ್ಸ್ ಆಗಿರುವ ಸಿಎಸ್ಕೆ ಆರಂಭದಿಂದಲೂ ಕಳಪೆ ಪ್ರದರ್ಶನ ನೀಡುತ್ತಾ ಬಂದಿದೆ. ಈ ಮೂಲಕ 18ನೇ ಐಪಿಎಲ್ ಟೂರ್ನಿಯಲ್ಲಿ ಎಲಿಮಿನೇಟ್ ಆದ ಮೊದಲ ತಂಟವಾಗಿದೆ.
ಮೊದಲ ಬ್ಯಾಟ್ ಮಾಡಿದ ಚೆನ್ನೈ ತಂಡ 19.2 ಓವರ್ ಗಳಲ್ಲಿ 190 ರನ್ ಗಳಿಗೆ ಆಲೌಟ್ ಆಯ್ತು. ಸ್ಯಾಮ್ ಕರನ್ ಭರ್ಜರಿ ಬ್ಯಾಟ್ ಬೀಸಿ 4 ಸಿಕ್ಸ್ ಹಾಗೂ 9 ಫೋರ್ ಗಳೊಂದಿಗೆ 47 ಬೌಲ್ ಗಳಲ್ಲಿ 88 ರನ್ ಗಳಿಸಿದರು. ಬ್ರೇವಿಸ್ 32 ರನ್ ಹೊರತು ಪಡಿಸಿ ಉಳಿದವರು ಎರಡಂಕಿ ದಾಟಲು ಕಷ್ಟಪಟ್ಟರು. ಪಂಜಾಬ್ ಪರ ಚಹಲ್ 4 ವಿಕೆಟ್ ಪಡೆದು ಮಿಂಚುವ ಮೂಲಕ ಚೆನ್ನೈಗೆ ಶಾಕ್ ಕೊಟ್ಟರು. ಅರ್ಷದೀಪ್ ಸಿಂಗ್, ಜಾನ್ಸನ್ ತಲಾ 2 ವಿಕೆಟ್ ಪಡೆದರು. ಉಮರ್ಜಿ, ಬರಾರ್ ತಲಾ 1 ವಿಕೆಟ್ ಪಡೆದರು.
ಈ ಸ್ಕೋರ್ ಚೇಸ್ ಮಾಡಿದ ಪಂಜಾಬ್ ತಂಡ ಸಹ ಪಂದ್ಯದ ಕೊನೆಯ ಓವರ್ ತನಕ ಗೆಲುವಿಗಾಗಿ ಫೈಟ್ ಮಾಡಿತು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಪ್ರಭಾಸಿಮರ್ನ್ ಸಿಂಗ್ 54, ನಾಯಕ ಶ್ರೇಯಸ್ ಅಯ್ಯರ್ 72 ರನ್ ಗಳಿಂದಾಗಿ 19.4 ಓವರ್ ಗಳಿಗೆ 6 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿ ಗೆಲುವಿನ ದಡ ಸೇರಿತು. ಶ್ರೇಯಸ್ ಅಯ್ಯರ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು. ಸಿಎಸ್ಕೆ ಪರ ಅನುಭವಿ ಆಟಗಾರರೆಲ್ಲ ವಿಫಲರಾದರು. ನಾಯಕತ್ವ ಬದಲಾವಣೆ ಪರಿಣಾಮ ಬೀರಿತು. 43 ವರ್ಷದ ಧೋನಿ ಬ್ಯಾಟಿಂಗ್ ಬಂದ ಸ್ಥಾನ ಸಹ ಎಲ್ಲರ ಟೀಕೆಗೆ ಗುರಿ ಆಯಿತು. ಟೂರ್ನಿಯ ಆರಂಭದಿಂದಲೇ ಹಲವು ಯಡವಟ್ಟುಗಳು, ಕಳಪೆ ಪ್ರದರ್ಶನದಿಂದ ಚೆನ್ನೈ ತಂಡ ಹೊರ ಬೀಳುವ ಮೂಲಕ ನಿರಾಸೆ ಅನುಭವಿಸಿದೆ.