ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಗುರುವಾರ ವಿಧಾನ ಪರಿಷತ್ ನಲ್ಲೂ ಅಮಿತ್ ಶಾ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಕಾಂಗ್ರೆಸ್ ಸದಸ್ಯರು ಹಾಗೂ ಬಿಜೆಪಿ ಸದಸ್ಯರ ನಡುವೆ ಜಟಾಪಟಿ ನಡೆಯಿತು. ಕಾಂಗ್ರೆಸ್ ಮೇಲೆ ಬಿಜೆಪಿ, ಬಿಜೆಪಿ ಮೇಲೆ ಕಾಂಗ್ರೆಸ್ ಆರೋಪಗಳನ್ನು ಮಾಡುತ್ತಾ ಘೋಷಣೆ ಕೂಗಿದರು. ಈ ವಿಚಾರದ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಸದಸ್ಯ ಬಿ.ಕೆ ಹರಿಪ್ರಸಾದ್ ಸಭಾಪತಿಗೆ ಮನವಿ ಮಾಡಿ ಪಟ್ಟು ಹಿಡಿದರು.
ಈ ವೇಳೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಿ.ಟಿ ರವಿ ಸೇರಿ ಇತರರು ಅಂಬೇಡ್ಕರ್ ಫೋಟೋ ಹಿಡಿದು ಅವರನ್ನು ಸೋಲಸಿದ್ದು ಕಾಂಗ್ರೆಸ್ ಎಂದು ಹೇಳಿದರು. ಅಂಬೇಡ್ಕರ್ ಅವರನ್ನು ಅವಮಾನಿಸಿದ್ದು ಕಾಂಗ್ರೆಸ್ ಎಂದು ಪ್ಲೇ ಕಾರ್ಡ್ ಹಿಡಿದರು. ಹೀಗಾಗಿ ಗದ್ದಲ ಉಂಟಾಯಿತು. ಸಭಾಪತಿ ಬಸವರಾಜ್ ಹೊರಟ್ಟಿ ಕಲಾಪ ಮುಂದೂಡಿದರು. ಗಲಾಟೆ ಮುಂದುವರೆಯಿತು. ಈ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರಗೆ ಸಿ.ಟಿ ರವಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸಭಾಪತಿಗೆ ದೂರು ನೀಡಿದ್ದಾರೆ. ನಾನು ಆಕ್ಷೇಪಾರ್ಹ ಪದ ಬಳಿಸಿರುವ ದಾಖಲೆಯಿದ್ದರೆ ತೆಗೆಯಿರಿ. ಕಪೋಕಲ್ಪಿತ ಹೇಳಿಕೆಗೆ ಉತ್ತರ ಕೊಡಲ್ಲ ಎಂದು ಸಿ.ಟಿ ರವಿ ಹೇಳಿದ್ದಾರೆ.