ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ(Hubballi): ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು 10 ಅಯ್ಯಪ್ಪ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ಅಚ್ಚವ್ವನ ಕಾಲೋನಿಯಲ್ಲಿರುವ ಈಶ್ವರ ದೇವಸ್ಥಾನದಲ್ಲಿ ನಡೆದಿದೆ. ಭಾನುವಾರ ತಡರಾತ್ರಿ ಸುಮಾರು 1.30ಕ್ಕೆ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಕೆಎಂಸಿ-ಆರ್ ಐ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಬಾಲಕ ವಿನಾಯಕ ಬಾತೇಕರ(12), ಸಂಜಯ ಸವದತ್ತಿ(20), ರಾಜು ಹರ್ಲಾಪುರ(21), ಮಂಜು ತೋರದ(22), ಪ್ರಕಾಶ ಬಾತಕೇರ(42), ಅಜ್ಜಸ್ವಾಮಿ(58), ತೇಜಸ್ ರೆಡ್ಡಿ(26), ಪ್ರವೀಣ ಛಲವಾದಿ(24), ಶಂಕರ ರಾಯನಗೌಡ್ರ(29) ಎನ್ನುವ ಗಾಯಗೊಂಡಿದ್ದಾರೆ. ರಾತ್ರಿ ಮಲಗಿದ್ದಾಗ ಅಯ್ಯಪ್ಪ ಮಾಲಾಧಾರಿಯೊಬ್ಬರ ಕಾಲು ಸಿಲಿಂಡರ್ ಗೆ ತಾಗಿದೆ. ಅದು ಉರುಳಿದೆ. ರೆಗ್ಯೂಲೇಟರ್ ಸಡಿಲಗೊಂಡು ಬಿಚ್ಚಿದೆ. ಹಚ್ಚಿದ ದೀಪ ತಾಗಿ ಸ್ಫೋಟಗೊಂಡಿದೆ.