Ad imageAd image

ಗೃಹ ಪ್ರವೇಶ ದಿನವೇ ಸಿಲಿಂಡರ್ ಸ್ಫೋಟ, 6 ಜನರಿಗೆ ಗಾಯ

Nagesh Talawar
ಗೃಹ ಪ್ರವೇಶ ದಿನವೇ ಸಿಲಿಂಡರ್ ಸ್ಫೋಟ, 6 ಜನರಿಗೆ ಗಾಯ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ದೊಡ್ಡಬಳ್ಳಾಪುರ(Doddaballapura): ಗೃಹ ಪ್ರವೇಶದ ಖುಷಿಯಲ್ಲಿದ್ದ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು 6 ಜನರು ಗಾಯಗೊಂಡ ಘಟನೆ ದುರ್ಗಾಜೋಗಹಳ್ಳಿಯಲ್ಲಿ ಶನಿವಾರ ನಡೆದಿದೆ. ಗ್ರಾಮದ ರವಿಕುಮಾರ ಎಂಬುವರು ಹೊಸ ಮನೆ ಕಟ್ಟಿಸಿ ಗೃಹ ಪ್ರವೇಶ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಈ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು 6 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.

ರವಿಕುಮಾರ್(41), ಅನುಸೂಯ(37), ಭಾಗ್ಯಮ್ಮ(55), ವರ್ಷಿತಾ(21), ಮಿಥುನ್(14) ಹಾಗೂ ಚಿರಂತ್(11) ಸೇರಿ 6 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸ ಮನೆಯ ಪ್ರವೇಶದ ಖುಷಿಯಲ್ಲಿದ್ದವರಿಗೆ ಆಘಾತವಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

WhatsApp Group Join Now
Telegram Group Join Now
Share This Article