ಪ್ರಜಾಸ್ತ್ರ ಸುದ್ದಿ
ವಿಜಯನಗರ(Vijayanagara): ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ 11 ಮಂದಿಯಲ್ಲಿ ನಾಲ್ವರು ಮೃತಪಟ್ಟ ಘಟನೆ ಹೊಸಪೇಟೆ ತಾಲೂಕಿನ ಗಾದಿಗನೂರಿನಲ್ಲಿ ನಡೆದಿದೆ. ಕವಿತಾ(30), ಮೈಲಾರಪ್ಪ(45) ಶುಕ್ರವಾರ ಸಂಜೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದೆ ದಿನ ಮುಂಜಾನೆ ಹಾಲಪ್ಪ ಹಾಗೂ ಗಂಗಮ್ಮ ಎಂಬುವರು ಮೃತಪಟ್ಟಿದ್ದರು. ಸಂಜೆ ಮೃತದೇಹ ಊರಿಗೆ ತಲುಪಿದ್ದವು. ಇವರ ಅಂತ್ಯಸಂಸ್ಕಾರ ಮುಗಿಸುವಷ್ಟರಲ್ಲಿ ಮತ್ತಿಬ್ಬರ ಸಾವಿನ ಸುದ್ದಿ ಬಂದಿದೆ.
ಸೆಪ್ಟೆಂಬರ್ 27ರಂದು ಕವಿತಾ ಎಂಬುವರು ಗ್ಯಾಸ್ ಹಚ್ಚುವಾಗ ಸೋರಿಕೆಯಾಗಿ ಸ್ಫೋಟ ಸಂಭವಿಸಿದೆ. ಈ ವೇಳೆ 11 ಮಂದಿ ಗಾಯಗೊಂಡಿದ್ದರು, ಇವರು ಮೊದಲು ತೋರಣಗಲ್ ನ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ನೋಡಿದರೆ ನಾಲ್ವರು ಮೃತಪಟ್ಟಿದ್ದಾರೆ. ಕವಿತಾ ಹಾಗೂ ಮೈಲಾರಪ್ಪ ಮೃತದೇಹ ಶನಿವಾರ ಸಂಜೆ ಗ್ರಾಮಕ್ಕೆ ಬರಲಿವೆ.