ಪ್ರಜಾಸ್ತ್ರ ಸುದ್ದಿ
ಹಾವೇರಿ(Haveri): ಡ್ಯಾನ್ಸ್ ಮಾಸ್ಟರ್ ವೊಬ್ಬರನ್ನು ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿದ ಘಟನೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಮೋಟೆ ಬೆನ್ನೂರು ಹತ್ತಿರ ಈ ಒಂದು ಕೃತ್ಯ ನಡೆದಿದೆ. ಚಿತ್ರದುರ್ಗ ಮೂಲದ ಲಿಂಗೇಶ್ ಎನ್ನುವ ಡ್ಯಾನ್ಸ್ ಮಾಸ್ಟರ್ ಎಂಬುವರನ್ನು ಕೊಲೆ ಮಾಡಲಾಗಿದೆ.
ಯಾವ ಕಾರಣಕ್ಕೆ ಇಂತಹದೊಂದು ಘಟನೆ ನಡೆದಿದೆ ಅನ್ನೋದು ಇದುವರೆಗೂ ತಿಳಿದು ಬಂದಿಲ್ಲ. ಕೊಲೆ ನಡೆದ ಜಾಗದಲ್ಲಿ ಬೈಕ್, ಚಾಕು ಹಾಗೂ ನೀರಿನ ಬಾಟಲ್ ಸಿಕ್ಕಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಯಾರು ಕೊಲೆ ಮಾಡಿದ್ದು, ಯಾವ ಕಾರಣಕ್ಕೆ ಕೊಲೆ ಮಾಡಲಾಗಿದೆ ಅನ್ನೋದರ ತನಿಖೆ ನಡೆಸಲಾಗುತ್ತಿದೆ.