ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ಜಾಮೀನಿನ ಮೇಲೆ ಹೊರಗೆ ಇದ್ದಾರೆ. ಆದರೆ, ಹೈಕೋರ್ಟ್ ಷರತ್ತು ಪ್ರಕಾರ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಗೆ ಹೋಗುವಂತಿಲ್ಲ. ಹೀಗಾಗಿ ನಟ ದರ್ಶನ್ ಮೈಸೂರಿಗೆ ಹೋಗಲು ಗುರುವಾರ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯ ವಿಚಾರಣೆಯನ್ನು 57ನೇ ಸಿಸಿಎಚ್ ನ್ಯಾಯಾಲಯ ನಡೆಸಿದ್ದು, ಆಕ್ಷೇಪಣೆ ಸಲ್ಲಿಕೆಗೆ ಸರ್ಕಾರಿ ಅಭಿಯೋಜಕಿಗೆ ಸೂಚಿಸಿದೆ. ಹೀಗಾಗಿ ಅವರ ವಾದ ಆಲಿಸಿದ ಬಳಿಕ ಪ್ರತಿವಾದ ಕೇಳಿಕೊಂಡು ಕೋರ್ಟ್ ಏನು ತೀರ್ಮಾನ ತೆಗೆದುಕೊಳ್ಳುತ್ತೆ ಎನ್ನುವುದರ ಮೇಲೆ ಮುಂದಿನ ಹಾದಿ ತಿಳಿಯಲಿದೆ. ಡಿಸೆಂಬರ್ 13ರಂದು ದರ್ಶನ್, ಎ1 ಪವಿತ್ರಾಗೌಡ ಸೇರಿ 7 ಆರೋಪಿಗಳಿಗೆ ನಿಯಮಿತ ಜಾಮೀನು ನೀಡಿದೆ.