Ad imageAd image

ಮನೆ ಊಟಕ್ಕೆ ದರ್ಶನಗೆ ಸಿಗಲಿಲ್ಲ ಗ್ರೀನ್ ಸಿಗ್ನಲ್

ಕೊಲೆ ಪ್ರಕರಣದ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ಸಲ್ಲಿಸಿದ್ದ ಮನೆ ಊಟ, ಹಾಸಿಗೆ, ಪುಸ್ತಕದ ಅರ್ಜಿಗೆ 24ನೇ ಎಸಿಎಂಎಂ ಕೋರ್ಟ್ ಗ್ರೀನ್ ಸಿಗ್ನಲ್ ಕೊಡದೆ ವಜಾಗೊಳಿಸಿದೆ.

Nagesh Talawar
ಮನೆ ಊಟಕ್ಕೆ ದರ್ಶನಗೆ ಸಿಗಲಿಲ್ಲ ಗ್ರೀನ್ ಸಿಗ್ನಲ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಕೊಲೆ ಪ್ರಕರಣದ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್(actor darshan) ಸಲ್ಲಿಸಿದ್ದ ಮನೆ ಊಟ, ಹಾಸಿಗೆ, ಪುಸ್ತಕದ ಅರ್ಜಿಗೆ 24ನೇ ಎಸಿಎಂಎಂ ಕೋರ್ಟ್ ಗ್ರೀನ್ ಸಿಗ್ನಲ್ ಕೊಡದೆ ವಜಾಗೊಳಿಸಿದೆ. ಹೀಗಾಗಿ ಜೈಲೂಟ ಖಾಯಂ ಆಗಿದೆ. ಈ ಬಗ್ಗೆ ಗುರುವಾರಕ್ಕೆ ವಿಚಾರಣೆ ಕಾಯ್ದಿರಿಸಿದ್ದ ಕೋರ್ಟ್ ಅರ್ಜಿ ವಜಾಗೊಳಿಸಿದೆ.

ಜೈಲೂಟದಿಂದ ದರ್ಶನಗೆ ಸಮಸ್ಯೆಯಾಗಿಲ್ಲ. ಸಿನಿಮಾ(fllim) ಚಿತ್ರೀಕರಣದ ವೇಳೆ ಆದ ಗಾಯಕ್ಕೆ ಡಾಕ್ಟರ್ ಮಾತ್ರೆ ಕೊಟ್ಟಿದ್ದಾರೆ. ಜೈಲಿನ ನಿಯಮಾವಳಿ ಪ್ರಕಾರ ಮನೆ ಊಟಕ್ಕೆ ಅವಕಾಶವಿಲ್ಲ ಎಂದು ಪೊಲೀಸರ ಪರ ಅಭಿಯೋಜಕರು ಕೋರ್ಟ್ ಗೆ ಆಕ್ಷೇಪಣೆ ಸಲ್ಲಿಸಿದ್ದರು.

ಜೈಲೂಟದಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ದೇಹದ ತೂಕ ಕಡಿಮೆಯಾಗಿದೆ. ಅತಿಸಾರವಾಗುತ್ತಿದೆ. ಹೀಗಾಗಿ ಮನೆ ಊಟಕ್ಕೆ ಅವಕಾಶ ಮಾಡಿಕೊಡಬೇಕು ಎಂದು ನಟ ದರ್ಶನ್ ಪರ ವಕೀಲರು ಹೈಕೋರ್ಟ್ ಗೆ(High Court) ಅರ್ಜಿ ಸಲ್ಲಿಸಿದ್ದರು. ಆಗ ಹೈಕೋರ್ಟ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಸಲ್ಲಿಸುವಂತೆ ಸೂಚಿಸಿತ್ತು. ಹೀಗಾಗಿ ಇಲ್ಲಿ ಅರ್ಜಿ ಸಲ್ಲಿಸಿದ್ದರು. ಇಂದು ತೀರ್ಪು ಪ್ರಕಟವಾಗಿದೆ.

WhatsApp Group Join Now
Telegram Group Join Now
Share This Article