ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ರೆಗ್ಯೂಲರ್ ಬೇಲ್ ಸಂಬಂಧ ಇಂದು ವಾದ, ಪ್ರತಿವಾದ ನಡೆಯಿತು. ಎರಡು ಕಡೆಯಿಂದ ವಾದ ಕೇಳಿಸಿಕೊಂಡು ಹೈಕೋರ್ಟ್ ನ್ಯಾಯಮೂರ್ತಿಗಳು ಆದೇಶವನ್ನು ಕಾಯ್ದಿರಿಸಿದ್ದಾರೆ. ಆದರೆ, ಯಾವಾಗ ಆದೇಶ ನೀಡಲಾಗುವುದು ಎನ್ನುವುದು ಹೇಳಿಲ್ಲ. ದಿನಾಂಕ ನಿಗದಿ ಮಾಡದೆ ಜಾಮೀನು ಆದೇಶ ಕಾಯ್ದಿರಿಸಲಾಗಿದೆ.
ಇನ್ನು ಈಗಾಗ್ಲೇ ಮಧ್ಯಂತರ ಜಾಮೀನು ಡಿಸೆಂಬರ್ 11ರಂದು ಮುಗಿಯುತ್ತೆ. ಅಂದೇ ನಟ ದರ್ಶನ್ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ವಕೀಲರಾದ ಸಿ.ವಿ ನಾಗೇಶನವರು ನ್ಯಾಯಾಧೀಶರ ಮುಂದೆ ಹೇಳಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಎರಡ್ಮೂರು ತಿಂಗಳು ಬೆಡ್ ರೆಸ್ಟ್ ಬೇಕಾಗುತ್ತೆ ಎನ್ನುವುದನ್ನು ಸಹ ಹೇಳಿದ್ದಾರೆ. ಇದೆಲ್ಲವನ್ನು ಆಲಿಸಿದ ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ. ಇನ್ನೊಂದು ಕಡೆ ಮುಂದಿನ ಆದೇಶದವರೆಗೆ ಮಧ್ಯಂತರ ಜಾಮೀನು ಅವಧಿ ಸಹ ವಿಸ್ತರಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ನಟ ದರ್ಶನಗೆ ನಿರಾಳವಾಗಿದೆ. ಆದೇಶ ನಾಳೆ, ನಾಡಿದ್ದು, ಒಂದು ವಾರ ಆಗಬಹುದು. ಅಲ್ಲಿಯ ತನಕ ಮಧ್ಯಂತರ ಜಾಮೀನು ವಿಸ್ತರಣೆಯಾಗಿದೆ.