ಪ್ರಜಾಸ್ತ್ರ ಸುದ್ದಿ
ದಾವಣಗೆರೆ(Davanagere): ಸಿನಿಮಾ ನಟ, ನಟಿಯರನ್ನು, ಕ್ರೀಡಾಪಟುಗಳನ್ನು ಪ್ರೀತಿಸುವ, ಇಷ್ಟಪಡುವ ಬಹುದೊಡ್ಡ ಬಳಗವೇ ಇರುತ್ತೆ. ಅದರಲ್ಲೂ ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾನ್ಸ್ ಅಪಾರ ಸಂಖ್ಯೆಯಲ್ಲಿದೆ. ನಟ ದರ್ಶನ್ ಅಭಿಮಾನಿಗಳನ್ನು ನನ್ನ ಸೆಲೆಬ್ರಿಟಿಗಳು ಎಂದರೆ, ಅವರು ಡಿ ಬಾಸ್(D Boss) ಎನ್ನುತ್ತಾರೆ. ಹೀಗಾಗಿ ಅವರಿಗಾಗಿ ಎಲ್ಲದಕ್ಕೂ ಸಿದ್ಧ ಇರುತ್ತಾರೆ. ಇಂತಹ ಪ್ರೀತಿಯ ಅಭಿಮಾನಿಯೊಬ್ಬರು ತಮ್ಮ ಹೊಸ ಮನೆ ಮೇಲೆ ದರ್ಶನ್ ನಟನೆಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(Krantiveera Sangolli Rayanna) ಪಾತ್ರದ ಕಲಾಕೃತಿಯನ್ನು ನಿರ್ಮಿಸಿದ್ದಾರೆ.
ಫೆಬ್ರವರಿ 16 ದರ್ಶನ್ ಹುಟ್ಟು ಹಬ್ಬ. ಹೀಗಾಗಿ ಭಾನುವಾರದಿಂದ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ತಮ್ಮ ನೆಚ್ಚಿನ ನಟನ 48ನೇ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ಇದನ್ನು ಲಕ್ಷಾಂತರು ಜನರು ಮೆಚ್ಚಿಕೊಂಡಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ದರ್ಶನ್ ಸಿನಿ ಕರಿಯರ್ ನಲ್ಲಿ ಹೊಸರೀತಿಯ ಮೈಲುಗಲ್ಲು. ಅಂತಹ ಚಿತ್ರದ ಪಾತ್ರದಲ್ಲಿನ ಕಲಾಕೃತಿಯನ್ನು ಮನೆ ಮೇಲೆ ಕೆತ್ತಿಸುವ ಮೂಲಕ ಅಭಿಮಾನ ಮೆರೆದಿದ್ದಾರೆ.