ಪ್ರಜಾಸ್ತ್ರ ಸುದ್ದಿ
ಬಳ್ಳಾರಿ(Ballari): ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್(Darshan) ಸಧ್ಯ ಬಳ್ಳಾರಿಯ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಡೆದ ಘಟನೆಯಿಂದ ಅವರನ್ನು ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಇಲ್ಲಿ ದರ್ಶನ್ ಕುಟುಂಬಸ್ಥರು, ಅವರ ವಕೀಲರು ಬಿಟ್ಟರೆ ಬೇರೆ ಯಾರಿಗೂ ಭೇಟಿಗೆ ಅವಕಾಶವಿಲ್ಲ. ಆದರೆ, ಬೆಂಗಳೂರಿನಿಂದ ಬಂದ ಮಹಿಳಾ ಅಭಿಮಾನಿಯೊಬ್ಬರು ದರ್ಶನ್ ಭೇಟಿಗಾಗಿ ಜೈಲಿನ ಪೊಲೀಸರೊಂದಿಗೆ ವಾಗ್ವಾದ ಮಾಡಿದ್ದಾರೆ. ಕುಟುಂಬಸ್ಥರಿಗೆ ಮಾತ್ರ ಬಿಡುವುದಾದರೆ ವಿಜಯಲಕ್ಷ್ಮಿಯಂತೆ ನಾನು ದರ್ಶನ್ ಅವರನ್ನು ಮದುವೆಯಾಗುತ್ತೇನೆ ಎನ್ನುವ ಮೂಲಕ ಅಲ್ಲಿದ್ದವರಿಗೆ ಶಾಕ್ ಕೊಟ್ಟಿದ್ದಾರೆ.
ಬೆಂಗಳೂರಿನ ಕೆಂಗೇರಿ ಹತ್ತಿರ ವಾಸವಾಗಿರುವ ಲಕ್ಷ್ಮಿ ಎನ್ನುವ ಮಹಿಳಾ ಅಭಿಮಾನಿ(Fan) ತಿಂಡಿ, ತಿನಿಸಿಗಳನ್ನು ತೆಗೆದುಕೊಂಡು ಬಳ್ಳಾರಿಗೆ ಬಂದಿದ್ದಾರೆ. ಆದರೆ, ಜೈಲಿನ ಸಿಬ್ಬಂದಿ ಅವರನ್ನು ಒಳಗೆ ಬಿಟ್ಟಿಲ್ಲ. ಕುಟುಂಬಸ್ಥರಿಗೆ ಮಾತ್ರ ಬಿಡುವುದಾದರೆ ನಾನು ಅವರನ್ನು ಮದುವೆಯಾಗುತ್ತೇನೆ ಎಂದು ಹೈಡ್ರಾಮಾ ಮಾಡಿದ್ದಾಳೆ. ಬೆಂಗಳೂರು ಜೈಲಿನಲ್ಲೂ ಬಿಡಲಿಲ್ಲ. ಇಲ್ಲೂ ಬಿಡುತ್ತಿಲ್ಲ. ಅವರಿಗೆ ಹಣ್ಣು, ತಿಂಡಿ ಕೊಟ್ಟು ಮಾತನಾಡಿಸಿಕೊಂಡು ಹೋಗುತ್ತೇನೆ ಎಂದು ಪಟ್ಟು ಹಿಡಿದಿದ್ದಾಳೆ.