ಪ್ರಜಾಸ್ತ್ರ ಸುದ್ದಿ
ನಟ ದರ್ಶನ್ ನಟನೆಯ ಬಹುನಿರೀಕ್ಷಿತ ಡೆವಿಲ್ ಚಿತ್ರದ ಶೂಟಿಂಗ್ ಶುರುವಾಗಿದೆ. ಕೊಲೆ ಪ್ರಕರಣದ ಆರೋಪ ಹೊತ್ತಿರುವ ನಟ ದರ್ಶನ್, ಕಾನೂನು ಹೋರಾಟದ ನಡುವೆ ಇಂದಿನಿಂದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ಇದೇ ವೇಳೆ ಶಾಕಿಂಗ್ ನ್ಯೂಸ್ ವೊಂದು ಕೊಟ್ಟಿದ್ದಾರೆ. ಅಭಿಮಾನಿಯೊಬ್ಬರು ನಡೆದುಕೊಂಡ ರೀತಿಯಿಂದ ಮನಸ್ಸಿಗೆ ನೋವಾಗಿದ್ದು, ಅಕ್ಕನ ಮಗನನ್ನು ಡೆವಿಲ್ ಚಿತ್ರದಿಂದ ಹೊರ ಹಾಕಿದ್ದಾರೆ. ದರ್ಶನ್ ಅಕ್ಕನ ಮಗನಾದ ಚಂದು ಕಾಲಿಗೆ ಅಭಿಮಾನಿಯೊಬ್ಬ ಬಿದ್ದಿದ್ದು, ಇದು ನಟ ದರ್ಶನ್ ಗೆ ಸಾಕಷ್ಟು ಮುಜುಗರ ತಂದಿದೆ.
ನನ್ನ ಎಲ್ಲ ಸೆಲೆಬ್ರಿಟಿಸ್ ಗಳಿಗೆ ತಿಳಿಸುವುದೇನಂದರೆ ನೀವು ನನ್ನ ಮತ್ತು ನನ್ನ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿಗೆ ಚಿರಋಣಿ. ಆದರೆ, ನಮ್ಮ ಮೇಲಿನ ಅಭಿಮಾನದಿಂದ ಇನ್ನು ಏನೂ ಸಾಧನೆ ಮಾಡದಿರುವ ನನ್ನ ಅಕ್ಕನ ಮಗನಾದ ಚಂದುಗೆ ಅಭಿಮಾನಿಯೊಬ್ಬರು ಕಾಲಿಗೆ ಬೀಳುವುದನ್ನು ನೋಡಿ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಆದ್ದರಿಂದ ಡೆವಿಲ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಬೇಕಿದ್ದ ಚಂದುನನ್ನು ಈ ಚಿತ್ರದಿಂದ ಹೊರಗಿಡಲಾಗಿದೆ. ಚಂದು ಅಥವ ನನ್ನ ಮಗ ವಿನೀಶ್ ಗೆ ಅಭಿಮಾನದಿಂದಲೂ ಅಥವ ಅವರೊಂದಿಗೆ ಚೆನ್ನಾಗಿ ಗುರುತಿಸಿಕೊಂಡರೆ ನನಗೆ ಹತ್ತಿರವಾಗಬಹುದು ಎಂದು ನೀವು ಭಾವಿಸಿದ್ದರೆ ಅದನ್ನು ನಿಮ್ಮ ಮನಸ್ಸಿನಿಂದ ತೆಗೆದು ಹಾಕಿ. ಹೀಗೆ ಮಾಡುವುದು ನನಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ ಎನ್ನುವ ಮೂಲಕ ಸಾಧನೆಗೆ ಬೆಲೆ ಕೊಡಬೇಕು. ಇನ್ನು ಏನೂ ಸಾಧನೆ ಮಾಡದೆ ಇರುವ ಅಳಿಯ ಅಥವ ಮಗ ಯಾರಿದ್ದರೂ ಸರಿ ಎಂದಿದ್ದಾರೆ.