ಪ್ರಜಾಸ್ತ್ರ ಸುದ್ದಿ
ಬಳ್ಳಾರಿ(Ballari): ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್(D Boss) ಸೇರಿದಂತೆ ಇತರೆ ಆರೋಪಿಗಳನ್ನು ಬೇರೆ ಬೇರೆ ಜೈಲುಗಳಿಗೆ ಸ್ಥಳಂತಾರಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡಲಾಗುತ್ತಿದೆ ಎನ್ನುವುದಕ್ಕೆ ಸಾಕ್ಷಿ ಎಂಬಂತೆ ಸಿಕ್ಕ ಫೋಟೋ ಪ್ರಕರಣ ದೊಡ್ಡ ಚರ್ಚೆ ಆಯ್ತು. ಕೇಂದ್ರ ಮಟ್ಟದಲ್ಲಿ ರಾಜಕೀಯ ಸ್ವರೂಪ ಪಡೆದುಕೊಂಡಿತು. ಹೀಗಾಗಿ ನಟ ದರ್ಶನ್ ಸೇರಿ ಅನೇಕ ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ಸ್ಥಳಾಂತರಿಸಿದ್ದು, ಗುರುವಾರ ಮುಂಜಾನೆ ಬಳ್ಳಾರಿ ಜೈಲಿಗೆ ನಟ ದರ್ಶನರನ್ನು ಸ್ಥಳಾಂತರಿಸಲಾಯಿತು.
ಸುಮಾರು ಐದು ಗಂಟೆಗಳ ಪ್ರಯಾಣದ ಬಳಿಕ ನಟ ದರ್ಶನ್ ಬಳ್ಳಾರಿ ಜೈಲು ಸೇರಿದರು. ಇದಕ್ಕೂ ಮೊದಲು ಹಿರಿಯ ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಜೈಲಿನ ವರಿಷ್ಠಾಧಿಕಾರಿಗಳು ಚರ್ಚೆ ನಡೆಸಿದರು. ದರ್ಶನರನ್ನು ಕರೆದುಕೊಂಡು ವಾಹನದ ಮಾರ್ಗಗಳನ್ನು ಬದಲು ಮಾಡಿಕೊಂಡು ಕರೆದುಕೊಂಡು ಹೋಗಲಾಯ್ತು.