ಪ್ರಜಾಸ್ತ್ರ ಸುದ್ದಿ
ಬೀದರ(Bidara): ಎಮರ್ಜೆನ್ಸಿ ವಿಚಾರವಾಗಿ ಬಿಜೆಪಿಯವರು ನೀಡುವ ಹೇಳಿಕೆ ವಿರುದ್ಧ ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ ಕಿಡಿ ಕಾರಿದ್ದು, ಇನ್ನೂ 50 ವರ್ಷ ಎಮರ್ಜೆನ್ಸಿ, ಔರಂಗಜೇಬ್ ಎಂದು ಹೇಳುತ್ತೀರಿ. ಎಮರ್ಜೆನ್ಸಿ ಒಳ್ಳೆಯದು ಎಂದು ಯಾರೂ ಹೇಳಿಲ್ಲ. 11 ವರ್ಷದಲ್ಲಿ ನೀವು ಏನು ಮಾಡಿದೀರಿ ಹೇಳಿ ಎಂದು ಪ್ರಶ್ನಿಸಿದರು. ನೀವು ಬಿಜೆಪಿಯವರನ್ನು ಕೇಳುವುದಿಲ್ಲ. ಕೆಲಸ ಮಾಡುವವರಿಗೆ ಕೇಳುತ್ತೀರಿ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.
ಯಡಿಯೂರಪ್ಪ, ವಿಜಯೇಂದ್ರ ದೊಡ್ಡ ಕಳ್ಳರು ಎಂದು ಯತ್ನಾಳ್ ಹೇಳುತ್ತಿದ್ದಾರೆ. ಬಿಜೆಪಿಯವರು ಅವರನ್ನು ತೆಗೆದು ಹಾಕಿದ್ರಾ? ಅಭಿವೃದ್ಧಿ ವಿಚಾರ ಇಟ್ಟುಕೊಂಡು ಯಾವತ್ತಾದರೂ ಚುನಾವಣೆ ಮಾಡಿದ್ದಾರಾ? ಔರಂಗಜೇಬ್ ಸತ್ತು ಎಷ್ಟು ವರ್ಷ ಆಯ್ತು. ಈಗ ಮಾತನಾಡಿದರೆ ಅಭಿವೃದ್ಧಿಯಾಗುತ್ತಾ ಎಂದು ವಾಗ್ದಾಳಿ ನಡೆಸಿದರು.