ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಜಾಮೀನು ಅರ್ಜಿಯ ವಿಚಾರಕ್ಕೆ ಸಂಬಂಧಪಟ್ಟಂತೆ ಎಸ್ ಪಿಪಿ ಇಂದು ಸಹ ವಾದ ಮಾಡಿಸಿದರು. ದರ್ಶನ್ ಪರ ವಕೀಲರಾದ ಸಿ.ವಿ ನಾಗೇಶ್ ಮಂಡಿಸಿದ ವಿಚಾರಗಳಿಗೆ ಮಂಗಳವಾರ ಹಾಗೂ ಇಂದು ವಾದ ಮಂಡಿಸಿದರು. ಈ ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರ ಎಷ್ಟಿದೆ? ಸಿ.ವಿ ನಾಗೇಶ್ ಎತ್ತಿದ ಪ್ರಶ್ನೆಗಳಿಗೆ ಉತ್ತರ ನೀಡುವ ಕೆಲಸ ಮಾಡಿದರು.
ಎ2 ಆರೋಪಿ ದರ್ಶನಗೆ ಸಂಬಂಧಿಸಿದಂತೆ ಶೆಡ್ ನಲ್ಲಿದ್ದರು ಎನ್ನುವದಕ್ಕೆ ಸಾಕ್ಷಿ ಸಂಖ್ಯೆ 76ರ ಹೇಳಿಕೆಯಿದೆ. 76, 77, 78 ಹಾಗೂ 79 ಸಾಕ್ಷಿಗಳು ಶೆಡ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮೊಬೈಲ್ ಟವರ್ ಲೋಕೇಷನ್ ಇದೆ. ಕಾಲ್ ವಿವರ ಇದೆ. ಮರದ ಕೊಂಬೆಯಲ್ಲಿ ರಕ್ತದ ಕಲೆ ಇಲ್ಲವಾದರೆ ಮಹಜರು ಅನರ್ಹವಲ್ಲ. ಕೃತ್ಯದ ಸ್ಥಳದಿಂದ 96 ವಸ್ತುಗಳನ್ನು ಎಫ್ಎಸ್ಎಲ್ ಗೆ ಕಳಿಸಲಾಗಿತ್ತು. ಮೃತದೇಹದ ಫೋಟೋ ತೆಗೆದಿದ್ದು ಪ್ರದೋಶ್, ಇದನ್ನು ಯಾರಿಗೂ ಕಳಿಸಿಲ್ಲ. ಎಫ್ಐಆರ್ ದಾಖಲಾದ ಮೇಲೆ ಎ15, ಎ16, ಎ17 ಪೊಲೀಸರಿಗೆ ಶರಣಾದರು. ಜೂನ್ 10ರಂದು ಇನ್ಸ್ ಪೆಕ್ಟರ್ ವಿಚಾರಣೆಗೆ ಒಳಪಡಿಸಲಾಗಿದೆ. ಆ ದಿನ ರಾತ್ರಿ 10ಕ್ಕೆ ಕೊಂದವರು ಇವರಲ್ಲ ಎಂದು ತಿಳಿಯಿತು. ಮರುದಿನ ಮುಂಜಾನೆ ಮೈಸೂರಿಗೆ ತೆರಳಿ ಮುಂಜಾನೆ 8ಗಂಟೆಗೆ ದರ್ಶನ್ ಬಂಧಿಸಲಾಗಿದೆ ಅಂತಾ ಎಸ್ ಪಿಪಿ ಪ್ರಸನ್ನಕುಮಾರ್ ಹೇಳಿದ್ದಾರೆ.
ಇಲ್ಲಿ ಜಾಮೀನು ಅರ್ಜಿ ವಿಚಾರಣೆ ಮಾತ್ರ ನಡೆಯುತ್ತಿದೆ. ಇದರ ಬಗ್ಗೆ ಮಾತ್ರ ಕೋರ್ಟ್ ತೀರ್ಮಾನ ತೆಗೆದುಕೊಳ್ಳುತ್ತೆ. ಇಲ್ಲಿ ಕೂದಲು ಸೀಳಿದಂತೆ ಸಾಕ್ಷಿಗಳ ವಿಶ್ಲೇಷಣೆ ಬೇಡ. ಆರೋಪಿ ಮೇಲಿನ ಆರೋಪ ಸಾಬೀತಾಗುತ್ತದೆಯೇ ಎಂದು ಈಗ ತೀರ್ಮಾನಿಸುತ್ತಿಲ್ಲ ಎಂದಿರುವ ಎಸ್ ಪಿಸಿ ಎ2 ಆರೋಪಿ ದರ್ಶನಗೆ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದರು. ದರ್ಶನ್ ಪರ ವಕೀಲರಾದ ಸಿ.ವಿ ನಾಗೇಶ್ ನಾಳೆ ಮತ್ತೆ ಮರು ವಾದ ಮಾಡಲಿದ್ದು ಜಾಮೀನು ತೀರ್ಪು ನಾಳೆಯಾಗುತ್ತಾ, ತೀರ್ಪು ಕಾಯ್ದಿರಸಲಾಗುತ್ತಾ ನೋಡಬೇಕು. ಇನ್ನು ಎ1 ಆರೋಪಿ ಪವಿತ್ರಾಗೌಡ ಸೇರಿದಂತೆ ಉಳಿದ ಆರೋಪಿಗಳ ಜಾಮೀನು ಅರ್ಜಿಯ ತೀರ್ಪನ್ನು ಅಕ್ಟೋಬರ್ 14ಕ್ಕೆ 57ನೇ ಸಿಸಿಹೆಚ್ ಕೋರ್ಟ್ ಕಾಯ್ದಿರಿಸಿದೆ.