ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಲಿದೆ. ರೆಗ್ಯೂಲರ್ ಬೇಲ್ ಗಾಗಿ ನಟ ದರ್ಶನ್ ಪರ ವಕೀಲರಾದ ಸಿ.ವಿ ನಾಗೇಶ್ ಅವರು ಈಗಾಗ್ಲೇ ವಾದ ಮಂಡಿಸಿದ್ದಾರೆ. ಇವರ ಜೊತೆಗೆ ಎ1 ಆರೋಪಿ ಪವಿತ್ರಾಗೌಡ ಸೇರಿ ಇತರರ ಜಾಮೀನು ಅರ್ಜಿಯ ವಿಚಾರಣೆಯಿದ್ದು, ತೀರ್ಪು ಇಂದೇ ನೀಡಲಾಗುತ್ತಾ, ಮತ್ತೆ ಮುಂದೂಡಲಾಗುತ್ತಾ, ಜಾಮೀನು ಅರ್ಜಿ ವಜಾಗೊಳಿಸಲಾಗುತ್ತಾ ಎನ್ನುವ ಕುತೂಹಲವಿದೆ.
ಅನಾರೋಗ್ಯದ ಹಿನ್ನಲೆಯಿಂದಾಗಿ ಅಕ್ಟೋಬರ್ 30ರಂದು 6 ವಾರಗಳ ಕಾಲ ಮಧ್ಯಂತರ ಜಾಮೀನು ಸಿಕ್ಕಿದೆ. ಬಳ್ಳಾರಿ ಜೈಲಿನಿಂದ ಬೆಂಗಳೂರಿಗೆ ಬಂದಿರುವ ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗ್ಲೇ 5 ವಾರ ಮುಗಿದಿದ್ದು ಡಿಸೆಂಬರ್ 11ಕ್ಕೆ ಮಧ್ಯಂತರ ಜಾಮೀನು ಅವಧಿ ಮುಗಿಯಲಿದೆ. ಇದರ ನಡುವೆ ತನಿಖಾಧಿಕಾರಿಗಳು ಜಾಮೀನು ಅರ್ಜಿ ವಿರುದ್ಧ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಹೀಗಾಗಿ ಟೆನ್ಷನ್ ಶುರುವಾಗಿದೆ. ಇನ್ನು ಕಳೆದ ಸುಮಾರು ತಿಂಗಳುಕ್ಕಿಂತ ಹೆಚ್ಚು ದಿನಗಳಿಂದ ಎ1 ಆರೋಪಿ ಪವಿತ್ರಾಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ದರ್ಶನ್ ಮ್ಯಾನೇಜರ್ ನಾಗರಾಜ್ ಜಾಮೀನು ಅರ್ಜಿಯ ವಿಚಾರಣೆ ಸಹ ಇಂದೇ ನಡೆಯಲಿದೆ. ಇವರಿಗೆಲ್ಲ ರೆಗ್ಯೂಲರ್ ಬೇಲ್ ಸಿಗುತ್ತಾ ಇಲ್ಲವಾ ಕಾದು ನೋಡಬೇಕು.