Ad imageAd image

ಜ್ಞಾನ ಇಲ್ಲದ ವಕ್ಫ್ ಸಚಿವರಿಂದ ಗೊಂದಲ ಸೃಷ್ಟಿ: ದಸ್ತಗೀರ ಮುಲ್ಲಾ

ರಾಜ್ಯದಲ್ಲಿ ವಕ್ಫ್ ಆಸ್ತಿಯು ಅತೀಕ್ರಮಣ ಮತ್ತು ಕಬಳಿಕೆ ಆಗಿದ್ದು ಸರ್ಕಾರ ವಕ್ಫ್ ಆಸ್ತಿಯನ್ನು ಉಳಿಸಿಕೊಳ್ಳಬೇಕೆಂದು ನಾವು ಸರ್ಕಾರಕ್ಕೆ ಆಗ್ರಹಿಸುತ್ತೇವೆ.

Nagesh Talawar
ಜ್ಞಾನ ಇಲ್ಲದ ವಕ್ಫ್ ಸಚಿವರಿಂದ ಗೊಂದಲ ಸೃಷ್ಟಿ: ದಸ್ತಗೀರ ಮುಲ್ಲಾ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ರಾಜ್ಯದಲ್ಲಿ ವಕ್ಫ್ ಆಸ್ತಿಯು ಅತೀಕ್ರಮಣ ಮತ್ತು ಕಬಳಿಕೆ ಆಗಿದ್ದು ಸರ್ಕಾರ ವಕ್ಫ್ ಆಸ್ತಿಯನ್ನು ಉಳಿಸಿಕೊಳ್ಳಬೇಕೆಂದು ನಾವು ಸರ್ಕಾರಕ್ಕೆ ಆಗ್ರಹಿಸುತ್ತೇವೆ. ಆದರೆ, ವಕ್ಫ್ ಬಗ್ಗೆ ಜ್ಞಾನಾನೆ ಇಲ್ಲದ ವಕ್ಫ್ ಸಚಿವರು ವಕ್ಫ್ ಬೋರ್ಡ್ ಚುನಾವಣಾ ಪ್ರಚಾರಕ್ಕಾಗಿ ಬಂದು ವಕ್ಫ್ ಅದಾಲತ್ ಮಾಡುವುದರ ಮುಖಾಂತರ ಗೊಂದಲ ಸೃಷ್ಟಿಸಿ ಸುಮ್ಮನಿರುವದು ನೋಡಿದರೆ ಸರ್ಕಾರನೇ ಸಾರ್ವಜನಿಕರ ಆಸ್ತಿ ಅತೀಕ್ರಮಣ ಮಾಡಿದ ಹಾಗಾಗಿದೆ ಎಂದು ಟಿಪ್ಪು ಕ್ರಾಂತಿ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ದಸ್ತಗೀರ ಮುಲ್ಲಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, 1913ರ ಟ್ರಷ್ಟಿ ಆಕ್ಟ್ ಮತ್ತು1913 ರ ಮುಸಲ್ಮಾನ ವಕ್ಫ್ ವ್ಯಾಲಿಡಿಟಿ ಆಕ್ಟ್ ರಚಿಸಿ ಲಿಖಿತವಾಗಿ ಹಾಗೂ ಮೌಖಿಕವಾಗಿ ಧಾರ್ಮಿಕ ಸ್ಥಳಗಳಿಗೆ ಆಸ್ತಿಯನ್ನು ದತ್ತಿ, ದಾನ ಅಂದರೆ ವಕ್ಫ್ ಮಾಡಬಹುದು ಎಂದು ಕಾನೂನು ರಚಿಸಲಾಯಿತು. ತದನಂತರ 1954ರಲ್ಲಿ ವಕ್ಫ್ ಆಸ್ತಿಗಳ ರಕ್ಷಣೆ ಮತ್ತು ನಿರ್ವಹಣೆ ಮಾಡಲಿಕ್ಕೆ ವಕ್ಫ್ ಕಾನೂನನ್ನು ತರಲಾಯಿತು. ಕಾನೂನು ಮಾಡಿದ ನಂತರ 1965 ರಿಂದ 1970 ರವರೆಗೆ ವಕ್ಫ್ ಆಸ್ತಿಯನ್ನು ಸರ್ವೇ ಮಾಡಲಾಯಿತು. ನಂತರ 1974ರಲ್ಲಿ ಮುಂಬೈ ಕರ್ನಾಟಕ ವಕ್ಫ್ ಆಸ್ತಿಗಳನ್ನು ಗೆಜೆಟ್ಟನಲ್ಲಿ ನೋಂದಾಯಿಸಲಾಯಿತು. 2020-21ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮತ್ತೆ ವಕ್ಫ್ ಆಸ್ತಿಗಳನ್ನು ಗೆಜೆಟ್ಟನಲ್ಲಿ ನೋಂದಾಯಿಸಲಾಯಿತು. ಆದರೆ ಇಂದು ರಾಜ್ಯದಲ್ಲಿ ನಡೆದಿರುವ ವಿದ್ಯಮಾನಗಳನ್ನು ನೋಡಿದರೆ ವಕ್ಫ್ ಆಸ್ತಿಯನ್ನು ಭೂಗಳ್ಳರು ಹಾಗೂ ಅತೀಕ್ರಮಣಕಾರರು  ಕಬಳಿಸಿಕೊಂಡರೊ? ಅಥವಾ ವಕ್ಫ್ ಬೋರ್ಡ್ ನೇ ಸಾರ್ವಜನಿಕರ ಆಸ್ತಿ ಕಬಳಿಸಿಕೊಂಡಿತೋ ಎಂಬುವದು ಬಹಿರಂಗವಾಗಬೇಕಾಗಿದೆ.

ಅನಧಿಕೃತವಾಗಿ ವಕ್ಫ್ ಬೋರ್ಡ್ ಸಾರ್ವಜನಿಕರ ಮತ್ತು ರೈತರ ಆಸ್ತಿಯನ್ನು ಕಬಳಿಸಿಕೊಂಡಿದ್ದೆ ಆಗಿದ್ದರೆ, ಅನ್ಯಾಯಕ್ಕೆ ಒಳಗಾದವರು  ವಕ್ಫ್ ಟ್ರಿಬಿನಲ್ ಕೋರ್ಟಲ್ಲಿ ಮೂಲ ದಾಖಲೆಗೊಳೊಂದಿಗೆ ಅರ್ಜಿ ಸಲ್ಲಿಸಿ ನ್ಯಾಯ ಪಡೆದು ಕೊಳ್ಳಲು ಅವಕಾಶ ಇದೆ. ಆದರೆ ವಕ್ಫ್ ಆಸ್ತಿಯನ್ನು ಭೂಗಳ್ಳರು, ಅತೀಕ್ರಮಣಕಾರರು ಕಬಳಿಸಿಕೊಂಡರೆ ಸರ್ಕಾರ ಅಂಥವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸರ್ಕಾರ ಶೀಘ್ರ ವಕ್ಫ್ ಆಸ್ತಿಯನ್ನು ಸರ್ವೇ ಮಾಡಿಸಿ ಹದ್ದುಬಸ್ತಿ ಮಾಡುವುದರ ಮುಖಾಂತರ ವಕ್ಫ್ ಆಸ್ತಿಯನ್ನು ಉಳಿಸಿಕೊಳ್ಳಬೇಕು. ಸಾರ್ವಜನಿಕರಿಗೆ ನಿಜವಾಗ್ಲೂ ವಕ್ಫ್ ಇಲಾಖೆಯಿಂದ ತೊಂದರೆ ಆಗಿದ್ದರೆ, ಸರ್ಕಾರ ನಿವೃತ್ತ ನ್ಯಾಯಮೂರ್ತಿಗಳ ಸಮಿತಿ ರಚಿಸಿ ರಾಜ್ಯದಲ್ಲಿ ಯಾರು ಯಾರ ಆಸ್ತಿಯನ್ನು ಕಬಳಿಸಿಕೊಂಡಿದ್ದಾರೆ ಎಂದು ವರದಿ ತಯಾರಿಸಿ ಸರ್ಕಾರಕ್ಕೆ ಒಪ್ಪಿಸಲಿ. ಅದನ್ನು ಬಿಟ್ಟು ವೋಟ್ ಬ್ಯಾಂಕ್ ರಾಜಕಾರಣ ಮಾಡುವುದು ಸರಿ ಅಲ್ಲ. ತಮ್ಮ ತಮ್ಮ ಪಕ್ಷದ ಭೂಗಳ್ಳರನ್ನು ಉಳಿಸುವ ಸಲುವಾಗಿ  ಈ ರೀತಿಯ ತಪ್ಪು ಮಾಹಿತಿ ಸಾರ್ವಜನಿಕರಲ್ಲಿ ಮೂಡಿಸಿವುದು ಸರಿಯಲ್ಲ. ಈ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕರಿಗೇನಾದ್ರು ನೈತಕತೆ ಅನ್ನೋದು ಇದ್ದರೆ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾನಪಾಡಿಯವರ್ ವರದಿಯನ್ನು ಜಾರಿ ಮಾಡಲಿ ಮತ್ತು ಜಾರಿ ಮಾಡಿಸುವ ಸಲುವಾಗಿ ಹೋರಾಟ ಮಾಡಲಿ. ವಿಶೇಷವಾಗಿ ರಾಜ್ಯದಲ್ಲಿ ಬಿಜೆಪಿ ಪಕ್ಷದ ನಾಯಕರು ಜನರನ್ನು ದಾರಿತಪ್ಪಿಸಿವ ಕೆಲಸ ಹಾಗೂ ಕೋಮು ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಬಾರದು. ಒಟ್ಟಾರೆ  ಸರ್ಕಾರ ವಕ್ಫ್ ಆಸ್ತಿಯನ್ನು ಉಳಿಸಿಕೊಳ್ಳಬೇಕು ಎಂದು ಆಗ್ರಹಿಸುತ್ತೇನೆ ಎಂದು ಟಿಪ್ಪು ಕ್ರಾಂತಿ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ದಸ್ತಗೀರ ಮುಲ್ಲಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article